ಕಂದಹಾರ್: ಆತ್ಮಹತ್ಯಾ ದಾಳಿಗೆ 11 ಮಕ್ಕಳು ಬಲಿ
Update: 2018-04-30 18:58 IST
ಕಂದಹಾರ್, ಎ.30: ಕಂದಹಾರ್‌ನಲ್ಲಿ ‘ನೇಟೊ’ ವಾಹನಗಳ ಬೆಂಗಾವಲ ಪಡೆಯನ್ನು ಗುರಿಯಾಗಿಸಿಕೊಂಡು ಕಾರ್ ಬಾಂಬ್ ದಾಳಿ ನಡೆಸಲಾಗಿದೆ. ಆದರೆ ದುರದೃಷ್ಟವಶಾತ್ ಗುರಿತಪ್ಪಿ, ರಸ್ತೆ ಬದಿಯ ಧಾರ್ಮಿಕ ಶಿಕ್ಷಣ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದ್ದು 11 ಮಕ್ಕಳು ಸಾವನ್ನಪ್ಪಿದ್ದಾರೆ.
ನೇಟೊ ಪಡೆಗಳ ವಾಹನಗಳು ಸಾಗಿ ಹೋಗುತ್ತಿರುವುದನ್ನು ವೀಕ್ಷಿಸಲು ಮದರಸದಿಂದ ಹೊರಬಂದಿದ್ದ ಮಕ್ಕಳು ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದಾರೆ. ಘಟನೆಯಲ್ಲಿ ಐವರು ನೇಟೊ ಸೈನಿಕರು ಸೇರಿದಂತೆ 16 ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ವಹಿಸಿಕೊಂಡಿಲ್ಲ ಎಂದು ಕಂದಹಾರ್‌ನ ಶಾಸಕ ಅಬ್ದುಲ್ ರಹೀಮ್ ತಿಳಿಸಿದ್ದಾರೆ.