5 ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂ.ಗಳ ಬ್ಯಾಂಕ್ ವಂಚನೆ: ಆರ್‌ಬಿಐ

Update: 2018-05-02 14:12 GMT

ಹೊಸದಿಲ್ಲಿ,ಮೇ 2: ಕಳೆದ ಐದು ವರ್ಷಗಳಲ್ಲಿ ವಿವಿಧ ಬ್ಯಾಂಕುಗಳಲ್ಲಿ ಒಂದು ಲ.ಕೋ.ರೂ.ಗಳಷ್ಟು ಬೃಹತ್ ಮೊತ್ತದ 23,000ಕ್ಕೂ ಅಧಿಕ ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ಆರ್‌ಬಿಐ ತಿಳಿಸಿದೆ.

2017,ಎಪ್ರಿಲ್‌ನಿಂದ 2018,ಮಾರ್ಚ್ 1ರವರೆಗಿನ ಅವಧಿಯಲ್ಲಿ ಒಟ್ಟು 5,152 ವಂಚನೆ ಪ್ರಕರಣಗಳು ವರದಿಯಾಗಿವೆ. ಅತ್ಯಂತ ಹೆಚ್ಚಿನ ಮೊತ್ತ(28,459 ಕೋ.ರೂ.)ದ ವಂಚನೆಗಳೂ ಇದೇ ಅವಧಿಯಲ್ಲಿ ನಡೆದಿವೆ. 2016-17ನೇ ಹಣಕಾಸು ವರ್ಷದಲ್ಲಿ ಇಂತಹ 5,076 ಪ್ರಕರಣಗಳು (ವಂಚನೆ ಮೊತ್ತ 23,933 ಕೋ.ರೂ.)ವರದಿಯಾಗಿದ್ದವು ಎಂದು ಆರ್‌ಬಿಐ ಆರ್‌ಟಿಐ ವಿಚಾರಣೆಯೊಂದಕ್ಕೆ ನೀಡಿರುವ ಉತ್ತರದಲ್ಲಿ ತಿಳಿಸಿದೆ.

 2013ರಿಂದ 2018 ಮಾರ್ಚ್ 1ರವರೆಗಿನ ಅವಧಿಯಲ್ಲಿ ಪ್ರತಿ ಪ್ರಕರಣದಲ್ಲಿ ಒಂದು ಲ.ರೂ.ಅಥವಾ ಹೆಚ್ಚಿನ ಮೊತ್ತದ 23,866 ಪ್ರಕರಣಗಳು ವರದಿಯಾಗಿದ್ದು,ಒಟ್ಟಾರೆಯಾಗಿ ವಂಚನೆಯಾಗಿರುವ ಹಣದ ಪ್ರಮಾಣ 1,00,718 ಕೋ.ರೂ.ಗಳಾಗಿವೆ ಎಂದು ಆರ್‌ಬಿಐ ಹೇಳಿದೆ.

ವರದಿಯಾಗಿರುವ ವಂಚನೆ ಪ್ರಕರಣಗಳನ್ನು ವಿಶ್ಲೇಷಿಸಲಾಗುತ್ತಿದೆ ಮತ್ತು ಪ್ರತಿ ಪ್ರಕರಣದ ವಾಸ್ತವಾಂಶಗಳು ಮತ್ತು ಸಂದರ್ಭಗಳಿಗನುಗುಣವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದೂ ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News