80,000 ಚ. ಕಿ.ಮೀ. ಶೋಧಿಸಿದರೂ ಎಂಎಚ್370 ವಿಮಾನದ ಸುಳಿವಿಲ್ಲ

Update: 2018-05-02 17:08 GMT

ಸಿಡ್ನಿ, ಮೇ 2: ನಿಗೂಢವಾಗಿ ನಾಪತ್ತೆಯಾಗಿರುವ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನಕ್ಕಾಗಿ ಹಿಂದೂ ಮಹಾಸಾಗರದಲ್ಲಿ ನಡೆಯುತ್ತಿರುವ ನೂತನ ಶೋಧದಲ್ಲೂ ಯಾವುದೇ ಫಲಿತಾಂಶ ಲಭಿಸಿಲ್ಲ.

ಜನವರಿಯಿಂದ ಈವರೆಗೆ 80,000 ಚದರ ಕಿಲೋಮೀಟರ್ ಸಾಗರ ತಳವನ್ನು ಶೋಧಿಸಲಾಗಿದ್ದು ಅವಶೇಷಗಳ ಯಾವುದೇ ಸುಳಿವು ಪತ್ತೆಯಾಗಿಲ್ಲ. ಆದರೆ, ವಿಮಾನವನ್ನು ಪತ್ತೆಹಚ್ಚುವ ತನ್ನ ಕಾರ್ಯ ಮುಂದುವರಿಯುತ್ತದೆ ಎಂದು ಶೋಧ ಕಾರ್ಯದಲ್ಲಿ ತೊಡಗಿರುವ ಅಮೆರಿಕನ್ ತಂತ್ರಜ್ಞಾನ ಸಂಸ್ಥೆ ‘ಓಶನ್ ಇನ್ಫಿನಿಟಿ’ ಹೇಳಿದೆ.

ವಿಮಾನದ ಅವಶೇಷಗಳು ಇರುವ ಸಾಧ್ಯತೆಗಳು ಅಧಿಕವಾಗಿರುವ 25,000 ಚದರ ಕಿ.ಮೀ. ಸ್ಥಳವನ್ನು ಪತ್ತೆಹಚ್ಚಲಾಗಿದೆ ಎಂಬುದಾಗಿ ಆರಂಭದಲ್ಲಿ ಹೇಳಲಾಗಿತ್ತಾದರು, ಈಗ ಈ ವ್ಯಾಪ್ತಿ ವಿಸ್ತಾರಗೊಂಡಿದೆ.

2014 ಮಾರ್ಚ್ 8ರಂದು ರಾತ್ರಿ ಮಲೇಶ್ಯ ರಾಜಧಾನಿ ಕೌಲಾಲಂಪುರದಿಂದ ಚೀನಾ ರಾಜಧಾನಿ ಬೀಜಿಂಗ್‌ಗೆ 239 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಎಂಎಚ್370 ವಿಮಾನ ನಿಗೂಢವಾಗಿ ನಾಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News