×
Ad

ಸರ್ವೋಚ್ಚ ನ್ಯಾಯಾಲಯ ತನ್ನ ಘನತೆಯನ್ನು ರಕ್ಷಿಸಿಕೊಳ್ಳಲಿ

Update: 2018-05-03 23:59 IST

ನ್ಯಾಯಾಧೀಶರು ಬಹಳಷ್ಟು ರಾಜಕೀಯ ಬಂಡವಾಳ ಕಳೆದುಕೊಂಡಿದ್ದಾರೆ ಮತ್ತು ತಮ್ಮ ನ್ಯಾಯಬದ್ಧವಾದ ನೈತಿಕ ಸ್ಥೈರ್ಯ ಕಳೆದುಕೊಂಡಿದ್ದಾರೆ ಎಂಬುದು ರಾಜಕಾರಣಿಗಳಿಗೆ ಗೊತ್ತಿದೆ. ಈ ನೈತಿಕ ಅವಕಾಶವನ್ನು ಆಕ್ರಮಿಸಿಕೊಳ್ಳಲು ರಾಜಕಾರಣಿಗಳು ಮುಂದೊತ್ತಿ ಬರುತ್ತಿದ್ದಾರೆ. ಈ ಪ್ರವೃತ್ತಿ ಆಳುವ ಪಕ್ಷಕ್ಕಷ್ಟೇ ಸೀಮಿತವಾಗಿಲ್ಲ. ಆದ್ದರಿಂದಲೇ ಲೋಕಸಭೆಯಲ್ಲಿ ಶೇ.10ಕ್ಕಿಂತಲೂ ಕಡಿಮೆ ಸಂಸದರು ಇರುವ ಪಕ್ಷವೊಂದು ನ್ಯಾಯಾಂಗದ ವಿರುದ್ಧ (ಸಿಜೆಐ ವಿರುದ್ಧ) ಮಹಾಭಿಯೋಗ ನಡೆಸಬೇಕೆಂದು ಹೇಳುವ ನಿಲುವಳಿ ಮಂಡಿಸುವ ಧೈರ್ಯ ತೋರಿತು. ನಿಲುವಳಿಯಿಂದ ಯಾವ ರಾಜಕೀಯ ಉದ್ದೇಶವೂ ಸಾಧನೆಯಾಗಲಿಲ್ಲ. ಬದಲಾಗಿ ಅದು ಸುಪ್ರೀಂ ಕೋರ್ಟನ್ನು ವಿಶೇಷವಾಗಿ ಸಿಜೆಐಯವರನ್ನು ದುರ್ಬಲಗೊಳಿಸಿತು.

ರಕಾರವು ತನ್ನ ಹಕ್ಕುಗಳನ್ನು ತನಗೆ ಅಲ್ಲಗಳೆದಾಗ ಓರ್ವ ಬಡ ನಾಗರಿಕಳು, ನ್ಯಾಯಾಲಯಗಳಿಗಲ್ಲದೆ, ಬೇರೆ ಎಲ್ಲಿಗೆ ಹೋಗಬೇಕು? ಆದರೆ ಅತ್ಯುನ್ನತವಾದ, ಸ್ವತಃ ಸರ್ವೋಚ್ಚ ನ್ಯಾಯಾಲಯವೇ ಅದೇ ಸರಕಾರದಿಂದ ರಕ್ಷಣೆ ಪಡೆಯಬೇಕಾದ ಸ್ಥಿತಿಯನ್ನು ನೋಡಿದಾಗ ಅವಳ ವಿಶ್ವಾಸದ ಗತಿ ಏನು? ಇತ್ತೀಚೆಗೆ ಸರಕಾರವು, ತಾನು ಮಾಡಿದ್ದೇ ಸರಿ ಎನ್ನುವ ನಿಟ್ಟಿನಲ್ಲಿ, ಭಾರತದ ಮುಖ್ಯನ್ಯಾಯಾಧೀಶರ ಪರವಾಗಿ ರಕ್ಷಣೆಗೆ ನಿಂತಿತು. ಅದೇ ವಾರ, ಕೇಂದ್ರ ಕಾನೂನು ಸಚಿವರು, ಕೊಲಿಜಿಯಂ ನೇಮಿಸಿದ್ದ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರ ನೇಮಕಾತಿಗಳಲ್ಲಿ ಒಬ್ಬರ ನೇಮಕಾತಿಯನ್ನು ಮಾತ್ರ ಅಂಗೀಕರಿಸಿ, ಇನ್ನೊಬ್ಬರ ನೇಮಕಾತಿಯನ್ನು ಪುನರ್‌ಪರಿಗಣಿಸುವಂತೆ ಹೇಳಿ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ (ಸಿಜೆಐ) ಪತ್ರ ಬರೆದರು. ಒಬ್ಬರ ನೇಮಕಾತಿಯನ್ನು ಅನುಮೋದಿಸದೆ ಇರಲು, ಕೇರಳದಿಂದ ಬಂದ ಬಹಳ ಮಂದಿ ನ್ಯಾಯಾಧೀಶರು ಇದ್ದಾರೆ ಅಥವಾ ಸೇವಾ ಹಿರಿತನ ಇತ್ಯಾದಿ ಆಕ್ಷೇಪಗಳು ಸ್ವೀಕಾರಾರ್ಹವಲ್ಲ. ನಿಜ ಸಂಗತಿ ಏನೆಂದರೆ, ಸರಕಾರವು ಸ್ಪಷ್ಟ ಬಹುಮತ ಹೊಂದಿರುವ ತಾನು, ತಾನೇ ಅಂತಿಮ ಬಾಸ್ ಎಂದು ನ್ಯಾಯಾಂಗಕ್ಕೆ ಜ್ಞಾಪಿಸುತ್ತಿದೆ.

ನ್ಯಾಯಾಧೀಶರು ಬಹಳಷ್ಟು ರಾಜಕೀಯ ಬಂಡವಾಳ ಕಳೆದುಕೊಂಡಿದ್ದಾರೆ ಮತ್ತು ತಮ್ಮ ನ್ಯಾಯಬದ್ಧವಾದ ನೈತಿಕ ಸ್ಥೈರ್ಯ ಕಳೆದುಕೊಂಡಿದ್ದಾರೆ ಎಂಬುದು ರಾಜಕಾರಣಿಗಳಿಗೆ ಗೊತ್ತಿದೆ. ಈ ನೈತಿಕ ಅವಕಾಶವನ್ನು ಆಕ್ರಮಿಸಿಕೊಳ್ಳಲು ರಾಜಕಾರಣಿಗಳು ಮುಂದೊತ್ತಿ ಬರುತ್ತಿದ್ದಾರೆ. ಈ ಪ್ರವೃತ್ತಿ ಆಳುವ ಪಕ್ಷಕ್ಕಷ್ಟೇ ಸೀಮಿತವಾಗಿಲ್ಲ. ಆದ್ದರಿಂದಲೇ ಲೋಕಸಭೆಯಲ್ಲಿ ಶೇ.10ಕ್ಕಿಂತಲೂ ಕಡಿಮೆ ಸಂಸದರು ಇರುವ ಪಕ್ಷವೊಂದು ನ್ಯಾಯಾಂಗದ ವಿರುದ್ಧ (ಸಿಜೆಐ ವಿರುದ್ಧ) ಮಹಾಭಿಯೋಗ (ಇಂಪೀಚ್‌ಮೆಂಟ್) ನಡೆಸಬೇಕೆಂದು ಹೇಳುವ ನಿಲುವಳಿ ಮಂಡಿಸುವ ಧೈರ್ಯ ತೋರಿತು. ನಿಲುವಳಿಯಿಂದ ಯಾವ ರಾಜಕೀಯ ಉದ್ದೇಶವೂ ಸಾಧನೆಯಾಗಲಿಲ್ಲ. ಬದಲಾಗಿ ಅದು ಸುಪ್ರೀಂ ಕೋರ್ಟನ್ನು ವಿಶೇಷವಾಗಿ ಸಿಜೆಐಯವರನ್ನು ದುರ್ಬಲಗೊಳಿಸಿತು.
ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ, ನ್ಯಾಯಾಂಗಕ್ಕೆ ಅದರ ಜಾಗ ತೋರಿಸುವ ನಿಟ್ಟಿನಲ್ಲಿ ಎರಡೂ ಪಕ್ಷಗಳಲ್ಲಿ ಐಕ್ಯತೆ ಇದೆ. ನ್ಯಾಯಾಧೀಶರನ್ನು ನೇಮಕ ಮಾಡುವ ಮತ್ತು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗದ (ಎನ್‌ಜೆಎಸಿ) ಮೂಲಕ ಅವರನ್ನು, ಉತ್ತರದಾಯಿಗಳಾಗಿ ಮಾಡುವ ಒಂದು ಕಾನೂನನ್ನು ಅಂಗೀಕರಿಸುವಾಗ ಎರಡೂ ಪಕ್ಷಗಳು ಸೂಪರ್‌ಸಾನಿಕ್ ವೇಗದಲ್ಲಿ ಅನುಮೋದನೆ ನೀಡಿದ್ದು ನೆನಪಿದೆ ತಾನೇ?
ಸುಪ್ರೀಂ ಕೋರ್ಟ್ ಕೂಡ ಅದನ್ನು ಅಸಾಂವಿಧಾನಿಕವೆಂದು ಘೋಷಿಸುವುದರಲ್ಲಿ ಅಷ್ಟೇ ಉತ್ಸಾಹ ತೋರಿತು. ಈಗ, ಪರಸ್ಪರ ಒಬ್ಬರ ವಿರುದ್ಧ ಇನ್ನೊಬ್ಬರು ಕಚ್ಚಾಡುತ್ತಿರುವಾಗಲೂ ಇಬ್ಬರು/ಎರಡು ಪಕ್ಷಗಳು ಕೂಡ ತಮ್ಮ ಓರ್ವ ಸಾಮಾನ್ಯ ಶತ್ರುವನ್ನು ಹಿಂದಕ್ಕೆ ತಳ್ಳುತ್ತಿವೆ: ನ್ಯಾಯಾಂಗವೇ ಆ ಸಾಮಾನ್ಯ ಶತ್ರು.


ಇವೆಲ್ಲದರ ಮಧ್ಯೆ ಸಿಜೆಐ (ಚೀಫ್ ಜಸ್ಟಿಸ್ ಆಫ್ ಇಂಡಿಯಾ) ತನ್ನನ್ನು ರಕ್ಷಿಸಿಕೊಳ್ಳಬೇಕಾಗಿದೆ. ಈ ಗೋಜಲುಗಳ ಮಧ್ಯೆ ಅವರು ತನ್ನ ಸಂಸ್ಥೆಗಾಗಿ (ಸುಪ್ರೀಂ ಕೋರ್ಟ್‌ಗಾಗಿ) ಸಮರ್ಥವಾಗಿ ಹಿಂದೇಟು ನೀಡಬಲ್ಲರೇ?
ರಾಜಕಾರಣಿಗಳು ನ್ಯಾಯಾಂಗದ ಹೊಸ ದೌರ್ಬಲ್ಯವನ್ನು ಹುಡುಕುತ್ತಾ ಬಂದಿದ್ದಾರೆ. ಕೊಲಿಜಿಯಂ ಅಂಗೀಕರಿಸಿದ ನ್ಯಾಯಾಧೀಶರ ನೇಮಕಾತಿಗಳಲ್ಲಿ ವಿಳಂಬವಾಗುವುದು ಮಾಮೂಲಿಯಾಗಿಬಿಟ್ಟಿದೆ. ಕೊಲಿಜಿಯಮ್ ಮತ್ತೊಮ್ಮೆ ಕಣ್ಮುಚ್ಚಿ ಕೂತರೆ ಅಥವಾ ತನ್ನೊಳಗೇ ಕ್ಷುಲ್ಲಕ ವಿಚಾರಗಳಿಗಾಗಿ ಜಗಳ ಆಡುತ್ತ ಇದ್ದರೆ, ಸರಕಾರ ತನ್ನ ಇನ್ನಷ್ಟು ಉಡಾಫೆಯ ಹೆಜ್ಜೆ ಇಡುತ್ತದೆ. ಅದು ಯಾವ ರೀತಿಯ ಹೆಜ್ಜೆ ಎಂಬುದು ಊಹೆಗೆ ಬಿಟ್ಟ ವಿಷಯ. ಆದರೆ ಸುಪ್ರೀಂ ಕೋರ್ಟ್ ಮೊಣಕಾಲೂರಿದ ಸ್ಥಿತಿಯಲ್ಲೇ ಮುಂದುವರಿದರೆ ಸರಕಾರ ಸೇವಾಹಿರಿತನ ತತ್ವವನ್ನೇ ಉಲ್ಲಂಘಿಸಬಹುದು ಮತ್ತು ಮುಂದಿನ ಅತ್ಯಂತ ಹಿರಿಯ ನ್ಯಾಯಾಧೀಶ ಜಸ್ಟಿಸ್ ರಂಜನ್ ಗೊಗೊಯ್ ಅವರನ್ನು ಮುಂದಿನ ಸಿಜೆಐ ಆಗಿ ನೇಮಿಸಲು ತನ್ನ ಅನುಮೋದನೆಯನ್ನು ನೀಡದೆ ಇರಬಹುದು.
ಇತ್ತೀಚೆಗೆ ನ್ಯಾಯಾಂಗವು ಅದರ ಬಗ್ಗೆ ಇದ್ದ ಸಾರ್ವಜನಿಕ ಸಹಾನುಭೂತಿಯನ್ನು ಸಾಕಷ್ಟು ಕಳೆದುಕೊಂಡಿದೆ ಎಂದು ಸರಕಾರ ಸರಿಯಾಗಿಯೇ ಭಾವಿಸಿದೆ. ಲೋಯಾ ತೀರ್ಪಿನ ಟೀಕಾಕಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಷಯದಲ್ಲಿ ಮುಂದುವರಿದರೆ, ಈ ಭಾವನೆ ಇನ್ನಷ್ಟು ಗಟ್ಟಿಯಾಗುತ್ತದೆ. ಮತ್ತೊಮ್ಮೆ, ನ್ಯಾಯಾಂಗವು ಉದಾರಿಯಾಗುವುದರ ಬದಲು, ತನಗಾಗಿಯೇ ಹೋರಾಡುತ್ತಿದೆ ಎಂದು ಜನ ತಿಳಿಯುವಂತಾಗುತ್ತದೆ. ಇದು ಮತ್ತು ನ್ಯಾಯಾಧೀಶರ ನಡುವೆಯೇ ಮುಂದುವರಿಯುತ್ತಿರುವ ಒಮ್ಮತದ ಕೊರತೆ, ನ್ಯಾಯಾಂಗದ ಜೊತೆ ಭಾರತದ ಜನರಿಗಿರುವ ಸಾಮಾಜಿಕ ಒಪ್ಪಂದಕ್ಕೆ ಗಂಭೀರವಾದ ಹಾನಿ ಉಂಟು ಮಾಡಿದೆ.
ಆದ್ದರಿಂದ ನ್ಯಾಯಾಂಗವು ತನ್ನ ಘನತೆಗಾಗಿ ಹೋರಾಡಬೇಕಾದ ಸಮಯ ಇದು. ನ್ಯಾಯಾಧೀಶರು ಮತ್ತು ಕಾನೂನು ತಜ್ಞರು ತಮ್ಮ ತಮ್ಮಾಳಗಿನ ಭಿನ್ನಾಭಿಪ್ರಾಯಗಳನ್ನು ಕೊನೆಗೊಳಿಸಿ ನ್ಯಾಯಾಂಗವನ್ನು ರಕ್ಷಿಸಲಿಕ್ಕಾಗಿ ಹೋರಾಡಬೇಕಾದ ಸಮಯ ಈಗ ಬಂದಿದೆ.
ನ್ಯಾಯಾಂಗದ ಸದ್ಯದ ಬಿಕ್ಕಟ್ಟನ್ನು ವರ್ಣಿಸಲು ನಾನೊಂದು ಹಳೆಯ ರೂಪವನ್ನು ವಿವರಿಸ ಬಯಸುತ್ತೇನೆ:
1906-07ರಲ್ಲಿ, ಬ್ರಿಟಿಷರು ವಸಾಹತು ಮಸೂದೆ ತಂದರು. ಜನರು ದ್ವೇಷಿಸುತ್ತಿದ್ದ ಈ ಮಸೂದೆಯ ಪ್ರಕಾರ ಸರಕಾರ ಯಾವುದೇ ಭೂಮಾಲಕನ, ರೈತನ (ಪಂಜಾಬಿಯಲ್ಲಿ ಕರೆಯುವಂತೆ ಜಾಟ್‌ನ) ಭೂಮಿಯನ್ನು ವಶಪಡಿಸಿಕೊಳ್ಳುವ ಅಧಿಕಾರ ಪಡೆಯಿತು. ಆಗ ಭಗತ್‌ಸಿಂಗ್‌ನ ಚಿಕ್ಕಪ್ಪ ಅಜಿತ್ ಸಿಂಗ್ ಮತ್ತು ಲಾಲಾ ಲಜಪತ್ ರಾಯ್ ನೇತೃತ್ವದಲ್ಲಿ ಜನರು ಈ ಮಸೂದೆಯ ವಿರುದ್ಧ ದಂಗೆ ಎದ್ದರು. ದಂಗೆಯ ಹಾಡು ಲ್ಯಾರ್‌ಪುರ್ (ಈಗ ಫೈಸಲ್‌ಬಾದ್)ನ ಸಂಪಾದಕ ಬಂಕೆ ದಯಾಲ್ ಬರೆದದ್ದು. ಅದರಲ್ಲಿ ‘‘ಪಗ್ಡಿ ಸಂಭಾಲ್ ಜಟ್ಟಾ ಪಗ್ಡಿ ಸಂಭಾಲ್ ಓಯೆ/ತೆರಾ ಲೂಟ್‌ನ ಜಾಯೆ ಮಾಲ್ ಜಟ್ಟಾ’’ ಎಂದು ಹಾಡಲಾಗುತ್ತಿತ್ತು. ಅಂದರೆ, ‘‘ನಿನ್ನ ಮುಂಡಾಸನ್ನು ಭದ್ರಪಡಿಸಿ ಇಟ್ಟುಕೊ, ರೈತ ಬಂಧು, ನಿನ್ನ ಸಂಪತ್ತು ಮತ್ತು ಆತ್ಮ ಗೌರವವನ್ನೇ (ಪಗ್ಡಿ) ಕಿತ್ತುಕೊಂಡಾರು’’. ಆ ಚಳವಳಿ, ‘ಪಗ್ಡಿ ಸಂಭಾಲ್ ಜಟ್ಟಾ ಚಳವಳಿ’ ಎಂದೇ ಇತಿಹಾಸದಲ್ಲಿ ದಾಖಲಾಗಿದೆ.
ಇದೀಗ ಭಾರತೀಯ ನ್ಯಾಯಾಂಗದ ‘ಪಗ್ಡಿ ಸಂಭಾಲ್ ಜಟ್ಟಾ’ ಚಳವಳಿ ನಡೆಯಬೇಕಾದ ಸಮಯ ಬಂದಿದೆ.
ಕೃಪೆ: theprint.in

Writer - ಶೇಖರ್ ಗುಪ್ತಾ

contributor

Editor - ಶೇಖರ್ ಗುಪ್ತಾ

contributor

Similar News

ಜಗದಗಲ

ಜಗ ದಗಲ