ನ್ಯಾಯಾಧೀಶರತ್ತ ಚಪ್ಪಲಿ ಎಸೆದವನಿಗೆ 18 ವರ್ಷ ಜೈಲು

Update: 2018-05-06 17:00 GMT

ಲಾಹೋರ್, ಮೇ 7: ನ್ಯಾಯಾಧೀಶರತ್ತ ಚಪ್ಪಲಿ ಎಸೆದ ವ್ಯಕ್ತಿಯೋರ್ವನಿಗೆ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು 18 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಇದು ದೇಶದ ಇತಿಹಾಸದಲ್ಲೇ ಈ ಮಾದರಿಯ ಪ್ರಥಮ ಶಿಕ್ಷೆಯಾಗಿದೆ.

ಲಾಹೋರ್‌ನಿಂದ ಸುಮಾರು 400 ಕಿ.ಮೀ. ದೂರದಲ್ಲಿರುವ ಮುಝಫ್ಫರ್‌ಗಢ ನಿವಾಸಿ ಇಜಾಝ್ ಅಹ್ಮದ್ ಮಾರ್ಚ್ 20ರಂದು ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದಾಗ ಹಿರಿಯ ಸಿವಿಲ್ ನ್ಯಾಯಾಧೀಶ ಝಾಹಿದ್ ಕಯ್ಯೂಮ್‌ರತ್ತ ಚಪ್ಪಲಿ ಎಸೆದಿದ್ದನು.

ದರೋಡೆ ಪ್ರಕರಣವೊಂದರಲ್ಲಿ ವಿಚಾರಣಾಧೀನ ಕೈದಿಯಾಗಿರುವ ಇಜಾಝ್, ತನಗೆ ಜಾಮೀನು ಸಿಕ್ಕಿದ್ದರೂ, ಲಿಖಿತ ಆದೇಶದ ಅನುಪಸ್ಥಿತಿಯಿಂದಾಗಿ ತನ್ನನ್ನು ಇನ್ನೂ ಜೈಲಿನಿಂದ ಬಿಡುಗಡೆಗೊಳಿಸಲಾಗಿಲ್ಲ ಎಂದು ಆರೋಪಿಸಿ ಚಪ್ಪಲಿ ಎಸೆದಿದ್ದನು.

ನ್ಯಾಯಾಲಯವು ಆತನಿಗೆ 30 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News