ಸೌದಿ ಹಜ್ ಯಾತ್ರಿಕರ ನೋಂದಣಿ ಪ್ರಕ್ರಿಯೆ ಆರಂಭ

Update: 2018-05-06 17:16 GMT

ಲಂಡನ್, ಮೇ 6: ಈ ವರ್ಷ ಹಜ್ ಯಾತ್ರೆ ಕೈಗೊಳ್ಳ ಬಯಸುವ ಸೌದಿ ಅರೇಬಿಯದ ನಾಗರಿಕರು ಮತ್ತು ಅಲ್ಲಿರುವ ವಿದೇಶೀಯರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಘೋಷಿಸಿದೆ.

ದೇಶೀ ಯಾತ್ರಿಕರನ್ನು ನೋಂದಾಯಿಸುವ ಕಾರ್ಯವನ್ನು ಸ್ಥಳೀಯ ಹಜ್ ಕಂಪೆನಿಗಳು ಆರಂಭಿಸಿವೆ ಎಂದು ಸಚಿವಾಲಯ ತಿಳಿಸಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ತಮಗೆ ಹೊಂದುವ ಸೇವೆಗಳು ಮತ್ತು ಬೆಲೆಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಯಾತ್ರಿಕರಿಗೆ ಒದಗಿಸಲಾಗುವುದು.

ಮೊದಲ ಹಂತದಲ್ಲಿ, ಹಜ್ ವೆಬ್‌ಸೈಟ್ ಮೂಲಕ ತಮ್ಮ ಆಯ್ಕೆಯ ಸೇವೆಗಳನ್ನು ಆರಿಸಲು ಆಕಾಂಕ್ಷಿಗಳಿಗೆ ಅವಕಾಶವಿದೆ.

ತಮ್ಮಂದಿಗೆ ಯಾರು ಬರುತ್ತಾರೆ ಎಂಬ ವಿವರಗಳನ್ನೂ ಅವರು ವೆಬ್‌ಸೈಟ್ ಮೂಲಕ ನೋಂದಾಯಿಸಬಹುದಾಗಿದೆ.

ಎರಡನೇ ಹಂತದಲ್ಲಿ ಯಾತ್ರಿಕರು ತಮ್ಮ ನೋಂದಣಿಗಳನ್ನು ಅಂತಿಮಗೊಳಿಸಬಹುದಾಗಿದೆ. ಈ ಹಂತವು ಜುಲೈ 14ರಂದು ಆರಂಭಗೊಂಡು ಆಗಸ್ಟ್ 18ರಂದು ಮುಕ್ತಾಯಗೊಳ್ಳುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News