ದಕ್ಷಿಣ ಏಶ್ಯದ ಅರ್ಧದಷ್ಟು ಮಕ್ಕಳಿಗೆ ಮಾತ್ರ ಪ್ರಾಥಮಿಕ ಶಿಕ್ಷಣ: ಯುನಿಸೆಫ್

Update: 2018-05-07 17:01 GMT

ಕಠ್ಮಂಡು, ಮೇ 7: ದಕ್ಷಿಣ ಏಶ್ಯದಲ್ಲಿ ‘ಕಲಿಕಾ ಬಿಕ್ಕಟ್ಟು’ ನೆಲೆಸಿದ್ದು, ಪ್ರಾಥಮಿಕ ಶಾಲಾ ವಯಸ್ಸಿನ ಕೇವಲ ಅರ್ಧದಷ್ಟು ಮಕ್ಕಳು ಕನಿಷ್ಠ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ ಯುನಿಸೆಫ್ ಸೋಮವಾರ ಹೇಳಿದೆ.

ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಯುನಿಸೆಫ್ ಏರ್ಪಡಿಸಿದ ಕಲಿಕೆ ಮತ್ತು ಶಿಕ್ಷಣ ಲಭ್ಯತೆ ಕುರಿತ ಮೂರು ದಿನಗಳ ದಕ್ಷಿಣ ಏಶ್ಯ ಸಮಾವೇಶದಲ್ಲಿ ಈ ಬಗ್ಗೆ ಕಳವಳ ವ್ಯಕ್ತವಾಗಿದೆ.

ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಒಲಿ ಸಮಾವೇಶವನ್ನು ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News