ಜೆರುಸಲೇಮ್ ರಾಯಭಾರ ಕಚೇರಿ ಉದ್ಘಾಟನೆಗೆ ಟ್ರಂಪ್ ಗೈರು
Update: 2018-05-08 23:16 IST
ವಾಶಿಂಗ್ಟನ್, ಮೇ 8: ಜೆರುಸಲೇಂಗೆ ಸ್ಥಳಾಂತರಿಸಲ್ಪಟ್ಟಿರುವ ಅಮೆರಿಕದ ಇಸ್ರೇಲ್ ರಾಯಭಾರ ಕಚೇರಿಯ ಉದ್ಘಾಟನೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೋಗುವುದಿಲ್ಲ ಎಂದು ಶ್ವೇತಭವನ ಸೋಮವಾರ ಪ್ರಕಟಿಸಿದೆ.
ಉಪ ವಿದೇಶಾಂಗ ಕಾರ್ಯದರ್ಶಿ ಜಾನ್ ಸಲಿವಾನ್ ಅಮೆರಿಕ ನಿಯೋಗದ ನೇತೃತ್ವ ವಹಿಸುವರು.
ಟ್ರಂಪ್ ಪುತ್ರಿ ಇವಾಂಕಾ ಮತ್ತು ಅವರ ಗಂಡ ಹಾಗೂ ಶ್ವೇತಭವನದ ಹಿರಿಯ ಸಹಾಯಕ ಜ್ಯಾರೆಡ್ ಕಶ್ನರ್ ಹಾಗೂ ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್ ನಿಯೋಗದಲ್ಲಿರುವರು.
ಜೆರುಸಲೇಮನ್ನು ಇಸ್ರೇಲ್ ರಾಜಧಾನಿಯಾಗಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಟ್ರಂಪ್ ಅಂಗೀಕರಿಸಿರುವುದನ್ನು ಸ್ಮರಿಸಬಹುದಾಗಿದೆ. ತನ್ನ ದೇಶದ ರಾಯಭಾರ ಕಚೇರಿಯು ಟೆಲ್ ಅವೀವ್‌ನಿಂದ ಜೆರುಸಲೇಮ್‌ಗೆ ಸ್ಥಳಾಂತರಗೊಳ್ಳುವುದೆಂದು ಅವರು ಈ ಸಂದರ್ಭದಲ್ಲಿ ಘೋಷಿಸಿದ್ದರು.