ಕಾಂಗೊದಲ್ಲಿ ಮತ್ತೆ ಎಬೋಲಾ; 17 ಸಾವು

Update: 2018-05-09 17:14 GMT

ಕಿನ್ಶಾಸ (ಡಿ. ಆರ್. ಕಾಂಗೊ), ಮೇ 9: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ (ಡಿ. ಆರ್. ಕಾಂಗೊ)ದಲ್ಲಿ ಎಬೋಲಾ ರೋಗ ಮತ್ತೊಮ್ಮೆ ಸ್ಫೋಟಗೊಂಡಿದ್ದು, ದೇಶದ ವಾಯುವ್ಯ ಭಾಗದಲ್ಲಿ 17 ಮಂದಿ ಮೃತಪಟ್ಟಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

‘‘ಇಕ್ವೆಟಾರ್ ರಾಜ್ಯದಲ್ಲಿ 17 ಸಾವುಗಳು ಮತ್ತು 21 ಜ್ವರ ಪ್ರಕರಣಗಳು ದಾಖಲಾಗಿವೆ’’ ಎಂದು ಸಚಿವಾಲಯ ಹೇಳಿದೆ.

ಇದು ಡಿ. ಆರ್. ಕಾಂಗೊದಲ್ಲಿ 1976ರ ಬಳಿಕ ಎಬೋಲಾ ಸ್ಫೊಟಗೊಂಡಿರುವುದು ಒಂಭತ್ತನೇ ಬಾರಿಯಾಗಿದೆ. ಅಂದು ಝೈರೆ ಎಂಬುದಾಗಿ ಕರೆಯಲ್ಪಡುತ್ತಿದ್ದ ದೇಶದಲ್ಲಿ 1976ರಲ್ಲಿ ಮೊದಲ ಬಾರಿಗೆ ಬೆಲ್ಜಿಯಂ ನೇತೃತ್ವದ ತಂಡವೊಂದು ಈ ರೋಗವನ್ನು ಗುರುತಿಸಿತ್ತು.

ವಿಶ್ವ ಆರೋಗ್ಯ ಸಂಸ್ಥೆಯು 1 ಮಿಲಿಯ ಡಾಲರ್ (ಸುಮಾರು 6.70 ಕೋಟಿ ರೂಪಾಯಿ) ಮೊತ್ತವನ್ನು ತುರ್ತು ಪರಿಹಾರ ನಿಧಿಯಿಂದ ಬಿಡುಗಡೆ ಮಾಡಿದೆ, ಒಂದು ಸಮನ್ವಯ ತಂಡವನ್ನು ರಚಿಸಿದೆ ಹಾಗೂ ಕಾಂಗೊ ಸರಕಾರ ಮತು ಆರೋಗ್ಯ ಸಂಸ್ಥೆಗಳೊಂದಿಗೆ ಕೆಲಸ ಮಾಡಲು 50ಕ್ಕೂ ಅಧಿಕ ಪರಿಣತರನ್ನು ನಿಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News