ಆಝಾದಿ ಯಾವತ್ತಿಗೂ ಸಾಧ್ಯವಿಲ್ಲ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

Update: 2018-05-10 10:24 GMT

ಹೊಸದಿಲ್ಲಿ, ಮೇ 10: ಕಾಶ್ಮೀರಿ ಯುವಕರು ಅನಗತ್ಯವಾಗಿ ಯಾವುದೇ ಪ್ರಭಾವಕ್ಕೊಳಗಾಗಬಾರದು. ಸೇನೆಯ ಜತೆ ಹೊರಾಟ ಸಾಧ್ಯವಿಲ್ಲ. ಯಾವತ್ತೂ ಪ್ರತ್ಯೇಕಗೊಳ್ಳಬಯಸುವವರ ವಿರುದ್ಧ ಭದ್ರತಾ ಪಡೆಗಳು ಹೋರಾಟ ನಡೆಸುವುದರಿಂದ ಆಝಾದಿ ಸಾಧ್ಯವಿಲ್ಲ ಎಂದು ಭಾರತೀಯ ಸೇನೆಯ ಮುಖ್ಯಸ್ಥ  ಬಿಪಿನ್ ರಾವತ್  ಹೇಳಿದ್ದಾರೆ.

ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾವತ್, ರಾಜ್ಯದಲ್ಲಿನ ಯುವಕರು ಬಂದೂಕುಗಳನ್ನು ಕೈಗೆತ್ತಕೊಳ್ಳುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರು. "ಈ ಹಾದಿ ಆಝಾದಿ ತರುವುದೆಂದು ಈ ಯುವಕರನ್ನು ಕೆಲವರು ದಾರಿ ತಪ್ಪಿಸುತ್ತಿದ್ದಾರೆ'' ಎಂದವರು ಹೇಳಿದರು. "ಈ ಸಂಖ್ಯೆಗಳ (ಸೇನೆಯ ಜತೆಗಿನ ಕಾದಾಟದಲ್ಲಿ ಸಾವನ್ನಪ್ಪಿದ ಉಗ್ರರು) ಬಗ್ಗೆ ನನಗೆ ಪರಿವೆಯಿಲ್ಲ. ಇದು ಮುಂದುವರಿಯುವುದು ಎಂದು ನನಗೆ ತಿಳಿದಿದೆ. ಹೊಸ ಜನರು ನೇಮಕಗೊಳ್ಳುತ್ತಲೇ ಇರುತ್ತಾರೆ. ಆದರೆ ಇವೆಲ್ಲಾ ಪ್ರಯೋಜನಕ್ಕೆ ಬಾರದು. ಅವುಗಳಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಸೇನೆಯ ಜತೆ ಹೊರಾಟ ಸಾಧ್ಯವಿಲ್ಲ'' ಎಂದರು.

ಯಾರನ್ನೂ ಕೊಲ್ಲುವುದರಿಂದ ಭದ್ರತಾ ಪಡೆಗಳಿಗೆ ಸಂತೋಷ ದೊರೆಯದು. ಆದರೆ ಯಾರಾದರೂ ನಮ್ಮ ಜತೆ ಕಾದಾಡಬೇಕೆಂದಿದ್ದರೆ ನಾವು ನಮ್ಮ ಪೂರ್ಣ ಸಾಮರ್ಥ್ಯ ಉಪಯೋಗಿಸಿ ಕಾದಾಡುತ್ತೇವೆ ಎಂದರು. "ಇಲ್ಲಿನ ಭದ್ರತಾ ಪಡೆಗಳು ಅಷ್ಟೊಂದು ಕ್ರೂರವಾಗಿಲ್ಲ. ಸಿರಿಯಾ ಮತ್ತು ಪಾಕಿಸ್ತಾನ ನೋಡಿ. ಅವರು ಟ್ಯಾಂಕ್ ಗಳು ಹಾಗೂ ವಾಯು ಪಡೆಯನ್ನೂ ಇಂತಹ ಸನ್ನಿವೇಶಗಳಲ್ಲಿ ಉಪಯೋಗಿಸುತ್ತಾರೆ. ನಮ್ಮನ್ನು ಎಚ್ಟೇ ಕೆಣಕಿದರೂ ಸಾಮಾನ್ಯ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ನಾವು ಆದಷ್ಟು ಪ್ರಯತ್ನಿಸುತ್ತೇವೆ'' ಎಂದು ಅವರು ತಿಳಿಸಿದರು.

``ಯುವಜನತೆ ಆಕ್ರೋಶಗೊಂಡಿದೆ ಎಂದು ತಿಳಿದಿದೆ. ಆದರೆ ಅದಕ್ಕೆ ಭದ್ರತಾ ಪಡೆಗಳ ಮೇಲೆ ಆಕ್ರಮಣ ನಡೆಸುವುದು, ಕಲ್ಲು ತೂರಾಟ ನಡೆಸುವುದು ಸರಯಲ್ಲ''

ಜನಸಾಮಾನ್ಯರು ತೊಂದರೆಗೀಡಾಗದಂತೆ ನೋಡಿಕೊಳ್ಳಲು ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ತಾವು ಸಿದ್ಧರಿರುವುದಾಗಿ ಹೇಳಿದ ಅವರು ಅದೇ  ಸಮಯ "ನಮ್ಮ ಮಂದಿ ಹಾಗೂ ನಮ್ಮ ವಾಹನಗಳ ಮೇಲೆ ದಾಳಿ ನಡೆಸಲಾಗುವುದಿಲ್ಲ ಎಂದು ಯಾರು ಖಾತರಿ ಪಡಿಸುತ್ತಾರೆ?'' ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News