ಬರ್ಲಿನ್: ಶಿರವಸ್ತ್ರ ಧರಿಸಿ ಬೋಧಿಸದಂತೆ ನ್ಯಾಯಾಲಯ ನಿರ್ಬಂಧ
Update: 2018-05-10 23:06 IST
ಬರ್ಲಿನ್ (ಜರ್ಮನಿ), ಮೇ 10: ಪ್ರಾಥಮಿಕ ತರಗತಿಗಳಲ್ಲಿ ಪಾಠ ಮಾಡುವಾಗ ಶಿರವಸ್ತ್ರ ಧರಿಸದಂತೆ ಬರ್ಲಿನ್‌ನ ಶಿಕ್ಷಕಿಯೊಬ್ಬರ ಮೇಲೆ ವಿಧಿಸಲಾಗಿರುವ ನಿರ್ಬಂಧ ಸರಿಯಾಗಿದೆ ಎಂದು ನಗರದ ಕಾರ್ಮಿಕ ನ್ಯಾಯಾಲಯವೊಂದು ಬುಧವಾರ ಹೇಳಿದೆ ಹಾಗೂ ಶಿಕ್ಷಕಿಯ ತಾರತಮ್ಯ ದೂರನ್ನು ವಜಾಗೊಳಿಸಿದೆ.
ಕರ್ತವ್ಯದಲ್ಲಿರುವ ಸರಕಾರಿ ಉದ್ಯೋಗಿಗಳು ಬಹಿರಂಗ ಧಾರ್ಮಿಕ ಚಿಹ್ನೆಗಳು ಮತ್ತು ಬಟ್ಟೆಗಳನ್ನು ಧರಿಸುವುದನ್ನು ನಗರದ ತಟಸ್ಥ ಕಾನೂನು ನಿಷೇಧಿಸುತ್ತದೆ ಹಾಗೂ ಈ ಕಾನೂನು ಧಾರ್ಮಿಕ ಅಭಿವ್ಯಕ್ತಿ ಸ್ವಾತಂತ್ರದ ಮೊದಲು ಬರುತ್ತದೆ ಎಂದು ನ್ಯಾಯಾಧೀಶ ಆರ್ನ್ ಬಾಯರ್ ತೀರ್ಪು ನೀಡಿದ್ದಾರೆ.
ಆದಾಗ್ಯೂ, ಈ ಶಿಕ್ಷಕಿ ಬರ್ಲಿನ್‌ನ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಹಿರಿಯ ವೃತ್ತಿಪರ ವಿದ್ಯಾರ್ಥಿಗಳಿಗೆ ಬೋಧಿಸುವುದನ್ನು ಮುಂದುವರಿಸಲು ಅವಕಾಶ ನೀಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.