ಗೋಲಾನ್: ಇಸ್ರೇಲಿ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ

Update: 2018-05-10 18:14 GMT

ಜೆರುಸಲೇಂ, ಮೇ 10: ಸಿರಿಯದಲ್ಲಿರುವ ಇರಾನ್‌ನ ಪಡೆಗಳು ಗೋಲಾನ್ ಹೈಟ್ಸ್ ನಲ್ಲಿ ಇಸ್ರೇಲ್ ಆಕ್ರಮಿತ ಪ್ರದೇಶದಲ್ಲಿರುವ ಇಸ್ರೇಲ್ ಸೇನಾ ನೆಲೆಗಳ ಮೇಲೆ ಸುಮಾರು 20 ಕ್ಷಿಪಣಿ ದಾಳಿ ನಡೆಸಿದೆ ಎಂದು ಇಸ್ರೇಲ್‌ನ ಸೇನೆ ಗುರುವಾರ ತಿಳಿಸಿದೆ.

ಇರಾನ್ ಹಾರಿಸಿದ ಕೆಲವು ಕ್ಷಿಪಣಿಗಳನ್ನು ಇಸ್ರೇಲ್‌ನ ಕ್ಷಿಪಣಿ ನಿರೋಧಕ ವ್ಯವಸ್ಥೆ ಪ್ರತಿಬಂಧಿಸಿದೆ. ಈ ದಾಳಿಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ . ಇಸ್ರೇಲ್ ಕೂಡಾ ಪ್ರತಿದಾಳಿ ನಡೆಸಿದೆ ಎಂದು ಇಸ್ರೇಲ್ ಸೇನೆಯ ವಕ್ತಾರ ಲೆ ಕ ಜೊನಾಥನ್ ಕಾನ್ರಿಕಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

 ಇರಾನಿನ ಅಲ್-ಖುದ್ಸ್ ಬ್ರಿಗೇಡ್‌ನ ಯೋಧರು ಬುಧವಾರ ಮಧ್ಯರಾತ್ರಿಯ ಬಳಿಕ ಗೋಲಾನ್‌ನಲ್ಲಿರುವ ಇಸ್ರೇಲ್ ಸೇನೆಯ ಮುಂಚೂಣಿ ನೆಲೆಗಳ ಮೇಲೆ ದಾಳಿ ನಡೆಸಿದ್ದಾರೆ . ಇಸ್ರೇಲ್ ವಿರುದ್ಧ ಇರಾನ್ ನಡೆಸಿರುವ ಈ ದಾಳಿಯನ್ನು ಇಸ್ರೇಲ್ ಸೇನೆ ಗಂಭೀರವಾಗಿ ಪರಿಗಣಿಸಿದೆ ಎಂದು ಕಾನ್ರಿಕಸ್ ತಿಳಿಸಿದ್ದಾರೆ. ಸಿರಿಯ ವಿಷಯದ ಕುರಿತು ಇಸ್ರೇಲ್ ಮತ್ತು ಇರಾನ್ ಮಧ್ಯೆ ಉದ್ವೇಗದ ಸ್ಥಿತಿ ನೆಲೆಸಿರುವಂತೆಯೇ ಈ ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News