ರಾಜಸ್ಥಾನ ರಾಯಲ್ಸ್‌ಗೆ ಜಯ
ಜೈಪುರ, ಮೇ 11: ಐಪಿಎಲ್ ಟ್ವೆಂಟಿ-20 ಟೂರ್ನಿಯ 43ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ 4 ವಿಕೆಟ್‌ಗಳ ಜಯ ಗಳಿಸಿದೆ.
ಗೆಲುವಿಗೆ 177 ರನ್‌ಗಳ ಸವಾಲನ್ನು ಪಡೆದ ರಾಜಸ್ಥಾನ ರಾಯಲ್ಸ್ ತಂಡ ಇನ್ನೂ 1 ಎಸೆತ ಬಾಕಿ ಇರುವಾಗಲೇ ಗೆಲುವಿಗೆ ಅಗತ್ಯದ ರನ್ ಸೇರಿಸಿತು.
ರಾಜಸ್ಥಾನ ತಂಡದ ಪರ ಜೋಸ್ ಬಟ್ಲರ್ ಅಜೇಯ 95 ರನ್(60ಎ, 11ಬೌ,2ಸಿ) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸ್ಟುವರ್ಟ್ ಬಿನ್ನಿ 22ರನ್ , ಸ್ಯಾಮ್ಸನ್ 21ರನ್, ಸ್ಟೋಕ್ಸ್ 11 ಮತ್ತು ಗೌತಮ್ 13 ರನ್ ಗಳಿಸಿದರು.
ಚೆನ್ನೈ ಸೂಪರ್‌ಕಿಂಗ್ಸ್ 176/4: ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 176 ರನ್ ಗಳಿಸಿತ್ತು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ತಂಡ ಆರಂಭಿಕ ದಾಂಡಿಗ ಅಂಬಟಿ ರಾಯುಡು(12) ಅವರನ್ನು ಬೇಗನೆ ಕಳೆದುಕೊಂಡಿತು. ಎರಡನೇ ವಿಕೆಟ್‌ಗೆ ಆರಂಭಿಕ ದಾಂಡಿಗ ಶೇನ್ ವಾಟ್ಸನ್ ಮತ್ತು ಸುರೇಶ್ ರೈನಾ 86 ರನ್‌ಗಳ ಜೊತೆಯಾಟ ನೀಡಿದರು. ಚೆನ್ನೈ ತಂಡದ ಸ್ಕೋರ್ 2.1 ಓವರ್‌ಗಳಲ್ಲಿ 19ಕ್ಕೆ ತಲುಪಿದ್ದಾಗ ಆರಂಭಿಕ ದಾಂಡಿಗ ರಾಯುಡು ವಿಕೆಟ್ ಉಡಾಯಿಸಿದ ಆರ್ಚರ್ ಅವರು 11.3ನೇ ಓವರ್‌ನಲ್ಲಿ ಚೆನ್ನೈಗೆ ಇನ್ನೊಂದು ಆಘಾತ ನೀಡಿದರು. ಶೇನ್ ವಾಟ್ಸನ್ 39 ರನ್(31ಎ, 2ಬೌ,2ಸಿ) ಗಳಿಸಿ ಆರ್ಚರ್ ಎಸೆತದಲ್ಲಿ ಬಟ್ಲರ್‌ಗೆ ಕ್ಯಾಚ್ ನೀಡಿ ವಾಪಸಾದರು.
ಸುರೇಶ್ ರೈನಾ 35 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 52 ರನ್(35ಎ, 6ಬೌ,1ಸಿ) ಗಳಿಸಿ ಸೋಧಿಗೆ ವಿಕೆಟ್ ಒಪ್ಪಿಸಿದರು.
ನಾಲ್ಕನೇ ವಿಕೆಟ್‌ಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಸ್ಯಾಮ್ ಬಿಲ್ಲಿಂಗ್ಸ್ 55 ರನ್‌ಗಳ ಜೊತೆಯಾಟ ನೀಡಿದರು. ಬಿಲ್ಲಿಂಗ್ಸ್ 27 ರನ್(22ಎ, 3ಬೌ) ಗಳಿಸಿ ರನೌಟಾದರು. ನಾಯಕ ಧೋನಿ 33 ರನ್(23ಎ, 1ಬೌ,1ಸಿ) ಗಳಿಸಿ ಔಟಾಗದೆ ಉಳಿದರು.
ರಾಜಸ್ಥಾನ ತಂಡದ ಡಿ.ಆರ್ಚರ್ 42ಕ್ಕೆ 2 ಮತ್ತು ಐಶ್ ಸೋಧಿ 29ಕ್ಕೆ 1 ವಿಕೆಟ್ ಪಡೆದರು.