ಮ್ಯಾನ್ಮಾರ್ ಸೇನೆ, ಬಂಡುಕೋರರ ಘರ್ಷಣೆಯಲ್ಲಿ 19 ಸಾವು

Update: 2018-05-12 18:13 GMT

ಯಾಂಗನ್ (ಮ್ಯಾನ್ಮಾರ್), ಮೇ 12: ಮ್ಯಾನ್ಮಾರ್‌ನ ಉತ್ತರದ ಶಾನ್ ರಾಜ್ಯದಲ್ಲಿ ಸೇನೆ ಮತ್ತು ಜನಾಂಗೀಯ ಬಂಡುಕೋರ ಗುಂಪೊಂದರ ನಡುವೆ ಶನಿವಾರ ನಡೆದ ಘರ್ಷಣೆಯಲ್ಲಿ ಕನಿಷ್ಠ 19 ಮಂದಿ ಮೃತಪಟ್ಟಿದ್ದಾರೆ.

‘‘19 ಮಂದಿ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ’’ ಎಂದು ಸೇನಾ ಮೂಲವೊಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ. ಹೋರಾಟದಲ್ಲಿ ಸುಮಾರು 25 ಮಂದಿ ಗಾಯಗೊಂಡಿದ್ದಾರೆ.

ದೇಶದ ಪಶ್ಚಿಮ ಭಾಗದಲ್ಲಿನ ರೊಹಿಂಗ್ಯಾ ಬಿಕ್ಕಟ್ಟಿನ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಗಮನ ನೀಡುತ್ತಿದ್ದಾಗ, ಉತ್ತರ ಮ್ಯಾನ್ಮಾರ್‌ನಲ್ಲಿ ಚೀನಾ ಗಡಿ ಸಮೀಪ ಘರ್ಷಣೆಗಳು ತೀವ್ರಗೊಂಡಿವೆ ಎಂದು ಮೂಲಗಳು ಹೇಳಿವೆ.

ತಮ್ಮದೇ ಆದ ದೇಶ ಹೊಂದಿರದ ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರ ಜನಾಂಗೀಯ ನಿರ್ಮೂಲನೆ ಕಾರ್ಯದಲ್ಲಿ ಮ್ಯಾನ್ಮಾರ್ ಸೇನೆ ತೊಡಗಿದೆ ಎಂಬುದಾಗಿ ಆರೋಪಿಸಲಾಗಿದೆ.

ಉತ್ತರ ಭಾಗದಲ್ಲಿ ಹೆಚ್ಚಿನ ಸ್ವಾಯತ್ತೆಗಾಗಿ ಹೋರಾಡುತ್ತಿರುವ ಹಲವಾರು ಬಂಡುಕೋರ ಗುಂಪುಗಳ ಪೈಕಿ ಒಂದಾಗಿರುವ ಟಾಂಗ್ ನ್ಯಾಶನಲ್ ಲಿಬರೇಶನ್ ಆರ್ಮಿ ಮತ್ತು ಸೇನೆಯ ನಡುವೆ ಶನಿವಾರ ಘರ್ಷಣೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News