ಕೊನೆಗೂ ಪಾಕ್‌ನಿಂದ ಹೊರಹೋದ ಅಮೆರಿಕ ರಾಜತಾಂತ್ರಿಕ

Update: 2018-05-15 17:36 GMT

ಇಸ್ಲಾಮಾಬಾದ್, ಮೇ 15: ಕಳೆದ ತಿಂಗಳು ರಸ್ತೆ ಅಪಘಾತವೊಂದರಲ್ಲಿ ಪಾಕಿಸ್ತಾನೀ ಮೋಟರ್‌ಸೈಕಲ್ ಸವಾರನೊಬ್ಬನನ್ನು ಕೊಂದಿದ್ದ ಅಮೆರಿಕದ ರಾಜತಾಂತ್ರಿಕ ಕೊನೆಗೂ ಪಾಕಿಸ್ತಾನ ತೊರೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಪಘಾತ ಪ್ರಕರಣದಲ್ಲಿ ಅಮೆರಿಕದ ರಾಜತಾಂತ್ರಿಕನಿಗೆ ವಿಚಾರಣೆ ಮತ್ತು ಶಿಕ್ಷೆಯಿಂದ ವಿನಾಯಿತಿ ನೀಡಿರುವುದು ಪಾಕಿಸ್ತಾನದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಅಮೆರಿಕದ ಪಾಕಿಸ್ತಾನಿ ರಾಯಭಾರ ಕಚೇರಿಯಲ್ಲಿ ರಕ್ಷಣಾ ಪ್ರತಿನಿಧಿಯಾಗಿರುವ ಕರ್ನಲ್ ಜೋಸೆಫ್ ಹಾಲ್ ಇಸ್ಲಾಮಾಬಾದ್‌ನಲ್ಲಿ ಎಪ್ರಿಲ್ 7ರಂದು ಟ್ರಾಫಿಕ್ ಕೆಂಪು ದೀಪವನ್ನು ಉಲ್ಲಂಘಿಸಿ ತನ್ನ ವಾಹನ ಚಲಾಯಿಸಿದ್ದರು. ಆಗ ಅವರ ವಾಹನವು ಬೈಕೊಂದಕ್ಕೆ ಢಿಕ್ಕಿ ಹೊಡೆದಿತ್ತು. ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಹಿಂಬದಿ ಸವಾರ ಗಾಯಗೊಂಡಿದ್ದರು.

ಕರ್ನಲ್ ಹಾಲ್ ಅವರನ್ನು ಅಮೆರಿಕದ ಕಾನೂನಿನಂತೆ ವಿಚಾರಣೆಗೆ ಗುರಿಪಡಿಸಲಾಗುವುದು ಎಂಬುದಾಗಿ ಅಮೆರಿಕ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಮೆರಿಕ ರಾಜತಾಂತ್ರಿಕನನ್ನು ಬಿಟ್ಟು ಬಿಡಲು ಪಾಕಿಸ್ತಾನ ನಿರ್ಧರಿಸಿತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News