ಭಾರತೀಯ ಶಿಕ್ಷಣ ಪಡೆದ ಭಿಕ್ಕುಗಳಿಗೆ ಚೀನಾದಲ್ಲಿ ನಿಷೇಧ

Update: 2018-05-15 17:54 GMT

ಬೀಜಿಂಗ್, ಮೇ 15: ಭಾರತದಲ್ಲಿ ‘ತಪ್ಪು ಶಿಕ್ಷಣ’ ಪಡೆದ ಟಿಬೆಟ್ ಭಿಕ್ಕುಗಳು ಬೌದ್ಧ ಧರ್ಮದ ಬಗ್ಗೆ ಉಪದೇಶ ಮಾಡುವುದನ್ನು ಚೀನಾದ ಸಿಚುವನ್ ಪ್ರಾಂತದ ಲಿಟಂಗ್ ಕೌಂಟಿ ನಿಷೇಧಿಸಿದೆ.

‘‘ಪ್ರತ್ಯೇಕತಾವಾದಿ ಕಲ್ಪನೆಗಳು ಹರಡುವುದನ್ನು ತಡೆಯಲು’’ ಅದು ಈ ಕ್ರಮ ತೆಗೆದುಕೊಂಡಿದೆ.

‘‘ಕೆಲವು ಭಿಕ್ಕುಗಳು 14ನೇ ದಲಾಯಿ ಲಾಮಾರ ಸಂಗಡಿಗರಿಂದ ವಿದೇಶದಲ್ಲಿ ಶಿಕ್ಷಣ ಪಡೆದಿರುವುದರಿಂದ, ಚೀನಾದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಡೆಸಲು ಅವರು ಸ್ಥಳೀಯ ಬೌದ್ಧರನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ, ಇಂಥ ಕ್ರಮ ತೆಗೆದುಕೊಳ್ಳುವುದು ಅಗತ್ಯವಾಗಿದೆ’’ ಎಂದು ಕೌಂಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದಲಾಯಿ ಲಾಮಾ ಮತ್ತು ಅವರ ಸಂಗಡಿಗರು ಪ್ರತ್ಯೇಕತಾವಾದಿಗಳು ಎಂಬುದಾಗಿ ಚೀನಾ ಪರಿಗಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News