×
Ad

ರಾಯಭಾರ ಕಚೇರಿಯನ್ನು ಜೆರುಸಲೇಂಗೆ ಸ್ಥಳಾಂತರಿಸಿದ ಗ್ವಾಟೆಮಾಲಾ

Update: 2018-05-16 23:37 IST

ಜೆರುಸಲೇಂ, ಮೇ 16: ಅಮೆರಿಕ ತನ್ನ ಇಸ್ರೇಲ್ ರಾಯಭಾರ ಕಚೇರಿಯನ್ನು ಟೆಲ್ ಅವೀವ್‌ನಿಂದ ಜೆರುಸಲೇಂಗೆ ಸ್ಥಳಾಂತರಿಸಿದ ಬೆನ್ನಿಗೇ, ಗ್ವಾಟೆಮಾಲಾ ಕೂಡ ತನ್ನ ರಾಯಭಾರ ಕಚೇರಿಯನ್ನು ಜೆರುಸಲೇಂಗೆ ಸ್ಥಳಾಂತರಿಸಿದೆ.

ವಿವಾದಾಸ್ಪದ ನಗರದಲ್ಲಿ ಮಂಗಳವಾರ ನಡೆದ ನೂತನ ರಾಯಭಾರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಗ್ವಾಟೆಮಾಲಾ ಅಧ್ಯಕ್ಷ ಜಿಮ್ಮಿ ಮೊರಾಲ್ಸ್ ಉಪಸ್ಥಿತರಿದ್ದರು.

ತನ್ನ ರಾಯಭಾರ ಕಚೇರಿಯನ್ನು ಜೆರುಸಲೇಂಗೆ ವರ್ಗಾಯಿಸಲಿರುವ ಇನ್ನೊಂದು ದೇಶವೆಂದರೆ ಪರಾಗ್ವೆ. ಅದು ತಿಂಗಳ ಕೊನೆಯೊಳಗೆ ತನ್ನ ರಾಯಭಾರ ಕಚೇರಿಯನ್ನು ವರ್ಗಾಯಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News