‘ಪಾಕ್ ಭಯೋತ್ಪಾದನೆ’ ಹೇಳಿಕೆಗೆ ಬದ್ಧ: ಶರೀಫ್
Update: 2018-05-16 23:38 IST
ಇಸ್ಲಾಮಾಬಾದ್, ಮೇ 16: ಮುಂಬೈ ದಾಳಿಗೆ ಸಂಬಂಧಿಸಿ ತಾನು ನೀಡಿರುವ ವಿವಾದಾತ್ಮಕ ಹೇಳಿಕೆಗೆ ರಾಷ್ಟ್ರೀಯ ಭದ್ರತಾ ಸಮಿತಿ ನೀಡಿರುವ ಖಂಡನೆಯನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ತಿರಸ್ಕರಿಸಿದ್ದಾರೆ.
ಬದಲಿಗೆ, ದೇಶದ ನಾಯಕತ್ವವು ದೇಶದ ಮೇಲೆ ಭಯೋತ್ಪಾದನೆಯ ಪರಿಣಾಮಗಳ ಬಗ್ಗೆ ಗಮನ ನೀಡಬೇಕು ಎಂದು ಹೇಳಿದ್ದಾರೆ.
ಭಾರತದ ಆರ್ಥಿಕ ರಾಜಧಾನಿ ಮುಂಬೈ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಭಯೋತ್ಪಾದಕರನ್ನು ಬಳಸಲಾಗಿತ್ತು ಎಂಬುದಾಗಿ ಇತ್ತೀಚೆಗೆ ‘ಡಾನ್’ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಶರೀಫ್ ಆರೋಪಿಸಿದ್ದರು. ಇದು ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.