ನಾಸಾ ಗಗನಯಾತ್ರಿಗಳಿಂದ 6 ಗಂಟೆಗಳ ಬಾಹ್ಯಾಕಾಶ ನಡಿಗೆ
Update: 2018-05-17 23:11 IST
ವಾಶಿಂಗ್ಟನ್, ಮೇ 17: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಇಬ್ಬರು ನಾಸಾ ಗಗನಯಾನಿಗಳು ಈ ವರ್ಷದ ಐದನೇ ಬಾಹ್ಯಾಕಾಶ ನಡಿಗೆ (ಸ್ಪೇಸ್ ವಾಕ್)ಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಬಾಹ್ಯಾಕಾಶ ನಿಲ್ದಾಣದ ನಿರ್ವಹಣೆಗಾಗಿ ಗಗನಯಾನಿಗಳು 6 ಗಂಟೆ 31 ನಿಮಿಷಗಳನ್ನು ಬಾಹ್ಯಾಕಾಶ ನಿಲ್ದಾಣದ ಕಕ್ಷೆಯಲ್ಲಿ ಕಳೆದರು.
ಎಕ್ಸ್‌ಪೆಡಿಶನ್ 55ರ ಹಾರಾಟ ಇಂಜಿನಿಯರ್‌ಗಳಾದ ಡ್ರೂ ಫ್ಯೂಸ್ಟಲ್ ಮತ್ತು ರಿಕಿ ಅರ್ನಾಲ್ಡ್ ನಿಲ್ದಾಣದ ಬಿಡಿಭಾಗಗಳ ಕೋಣೆಯಿಂದ ‘ಪಂಪ್ ಫ್ಲೋ ಕಂಟ್ರೋಲ್ ಸಬ್‌ಅಸೆಂಬ್ಲಿ’ಯನ್ನು ಡೆಕ್ಸ್‌ಟರ್ ರೋಬಟಿಕ್ ಆರ್ಮ್‌ಗೆ ಸ್ಥಳಾಂತರಿಸಿದರು.
ತಂಡವು ಬಳಿಕ ಕ್ಯಾಮರ ಗ್ರೂಪೊಂದನ್ನು ತೆಗೆದು ಮರು ಜೋಡಿಸಿತು ಹಾಗೂ ಇತರ ಹಲವಾರು ಪೂರಕ ಕೆಲಸಗಳನ್ನು ಮಾಡಿತು.