ಕಾಂಗೊದಲ್ಲಿ ಮತ್ತೆ ಎಬೋಲಾ; 23 ಸಾವು

Update: 2018-05-17 17:56 GMT

ಕಿನ್‌ಶಾಸ (ಕಾಂಗೊ), ಮೇ 17: ಇಕ್ವೆಟಾರ್ ಪ್ರಾಂತದ ರಾಜಧಾನಿಯಲ್ಲಿ ಎಬೋಲಾ ರೋಗ ಮತ್ತೆ ಕಾಣಿಸಿಕೊಂಡಿದೆ ಎಂದು ಕಾಂಗೊದ ಆರೋಗ್ಯ ಸಚಿವ ಒಲಿ ಇಲುಂಗ ಹೇಳಿದ್ದಾರೆ. ಮಬಂಡಕ ನಗರ ಸೇರಿದಂತೆ ವಂಗಟ ಆರೋಗ್ಯ ವಲಯಗಳಲ್ಲಿ ಎರಡು ಶಂಕಿತ ಮೆದುಳು ಜ್ವರದ ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದರು.

ಅವುಗಳ ಪೈಕಿ ಒಂದು ಪ್ರಕರಣ ಎಬೋಲಾ ಎಂಬುದಾಗಿ ಖಚಿತವಾಗಿದೆ. ಈಗಾಗಲೇ ಇಂಥ 500 ಪ್ರಕರಣಗಳನ್ನು ಗುರುತಿಸಲಾಗಿದೆ. ಕಾಂಗೊದಲ್ಲಿ ಹೊಸದಾಗಿ 23 ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News