ಟ್ರಂಪ್ ಗಾಲ್ಫ್ ಕ್ಲಬ್‌ನಲ್ಲಿ ಗುಂಡು ಹಾರಾಟ; ಓರ್ವ ಸೆರೆ

Update: 2018-05-18 18:07 GMT

ವಾಶಿಂಗ್ಟನ್, ಮೇ 18: ಅಮೆರಿಕದ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಒಡೆತನದ ರಿಸಾರ್ಟ್ 'ಟ್ರಂಪ್ ನ್ಯಾಶನಲ್ ಡೋರಲ್ ಗಾಲ್ಫ್ ಕ್ಲಬ್'ನಲ್ಲಿ ಶುಕ್ರವಾರ ಮುಂಜಾನೆ ಗುಂಡು ಹಾರಾಟ ನಡೆದಿದೆ ಹಾಗೂ ಓರ್ವ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಗುಂಡು ಹಾರಾಟದಲ್ಲಿ ಸಾವು-ನೋವುಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಡೋರಲ್ ಪೊಲೀಸ್ ಇಲಾಖೆ ಟ್ವಿಟರ್‌ನಲ್ಲಿ ಹೇಳಿದೆ.

ಮಯಾಮಿಯ ಹೊರವಲಯದಲ್ಲಿರುವ 800 ಎಕರೆ ವಿಸ್ತಾರದ ಟ್ರಂಪ್ ನ್ಯಾಶನಲ್ ಡೋರಲ್ ಗಾಲ್ಫ್ ಕ್ಲಬ್‌ನಲ್ಲಿ 'ಬ್ಲೂ ಮಾನ್‌ಸ್ಟರ್' ಸೇರಿದಂತೆ ವರ್ಷಕ್ಕೆ 4 ಚಾಂಪಿಯನ್‌ಶಿಪ್ ಗಾಲ್ಫ್ ಕೋರ್ಸ್‌ಗಳನ್ನು ನಡೆಸಲಾಗುತ್ತದೆ.

ಇದನ್ನು ಟ್ರಂಪ್ 2012ರಲ್ಲಿ 150 ಮಿಲಿಯ ಡಾಲರ್ (ಸುಮಾರು 1020 ಕೋಟಿ ರೂಪಾಯಿ)ಗೆ ಖರೀದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News