ನ್ಯೂಯಾರ್ಕ್ ನ್ಯಾಯಾಲಯದಲ್ಲಿ ದಿವಾಳಿಗೆ ಅರ್ಜಿ ಹಾಕಿದ ಕೇಂಬ್ರಿಜ್ ಅನಾಲಿಟಿಕಾ

Update: 2018-05-18 18:13 GMT

ಲಂಡನ್, ಮೇ 18: ಈ ವರ್ಷದ ಫೇಸ್‌ಬುಕ್ ಖಾಸಗಿತನ ಉಲ್ಲಂಘನೆ ವಿವಾದದ ಕೇಂದ್ರಬಿಂದುವಾಗಿರುವ ಲಂಡನ್‌ನ ಸಂಸ್ಥೆ ಕೇಂಬ್ರಿಜ್ ಅನಾಲಿಟಿಕಾ ಗುರುವಾರ ನ್ಯೂಯಾರ್ಕ್‌ನ ನ್ಯಾಯಾಲಯವೊಂದರಲ್ಲಿ ದಿವಾಳಿ ಅರ್ಜಿ ಸಲ್ಲಿಸಿದೆ.

ತನ್ನಲ್ಲಿ 1,00,001 ರಿಂದ 5 ಲಕ್ಷ ಡಾಲರ್ ವೌಲ್ಯದ ಆಸ್ತಿಯಿದೆ ಹಾಗೂ 10 ಲಕ್ಷದಿಂದ 1 ಕೋಟಿ ಡಾಲರ್‌ವರೆಗೆ ಸಾಲವಿದೆ ಎಂದು ಕೇಂಬ್ರಿಜ್ ಅನಾಲಿಟಿಕಾ ಎಲ್‌ಎಲ್‌ಸಿ ತಿಳಿಸಿದೆ.

ವ್ಯಾಪಾರದಲ್ಲಿ ತೀವ್ರ ಕುಸಿತವಾಗಿರುವ ಹಿನ್ನೆಲೆಯಲ್ಲಿ, ಕಂಪೆನಿಯನ್ನು ತಕ್ಷಣ ಮುಚ್ಚುವುದಾಗಿ ಹಾಗೂ ದಿವಾಳಿ ಕಲಾಪ ಆರಂಭಿಸುವುದಾಗಿ ಕೇಂಬ್ರಿಜ್ ಅನಾಲಿಟಿಕಾ ಮತ್ತು ಅದರ ಬ್ರಿಟಿಶ್ ಮೂಲ ಸಂಸ್ಥೆ ಎಸ್‌ಸಿಎಲ್ ಇಲೆಕ್ಷನ್ಸ್ ಲಿಮಿಟೆಡ್ ಈ ತಿಂಗಳ ಆರಂಭದಲ್ಲಿ ಹೇಳಿತ್ತು.

ಫೇಸ್‌ಬುಕ್ ಬಳಕೆದಾರರ ಅಗಾಧ ಮಾಹಿತಿಯನ್ನು ಕಲೆಹಾಕಿ ದುರ್ಬಳಕೆ ಮಾಡಿರುವ ಆರೋಪದಲ್ಲಿ ಕೇಂಬ್ರಿಜ್ ಅನಾಲಿಟಿಕಾವು ಮಾರ್ಚ್‌ನಲ್ಲಿ ಭಾರೀ ಪ್ರಮಾಣದಲ್ಲಿ ಸುದ್ದಿಯಾಗಿತ್ತು.

ಚುನಾವಣಾ ಉದ್ದೇಶಗಳಿಗಾಗಿ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯು 2014ರ ಬಳಿಕ 8.7 ಕೋಟಿ ಫೇಸ್‌ಬುಕ್ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಕಲೆಹಾಕಿದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News