ಅಮೆರಿಕ: ಸಿಐಎ ನೂತನ ಮುಖ್ಯಸ್ಥೆಯಾಗಿ ಗಿನಾ ಹ್ಯಾಸ್ಪೆಲ್

Update: 2018-05-18 18:28 GMT

ವಾಶಿಂಗ್ಟನ್, ಮೇ 18: ಹಿರಿಯ ಗೂಢಚಾರಿಣಿ ಗಿನಾ ಹ್ಯಾಸ್ಪೆಲ್ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಯ ಮೊದಲ ಮಹಿಳಾ ನಿರ್ದೇಶಕರಾಗಲಿದ್ದಾರೆ. ಗುರುವಾರ ಸೆನೆಟ್‌ನಲ್ಲಿ ನಡೆದ ಮತದಾನದಲ್ಲಿ ರಿಪಬ್ಲಿಕನ್ ಪಕ್ಷದ ಸಂಸದರ ಜೊತೆಗೆ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ 6 ಸಂಸದರೂ ಅವರ ಪರವಾಗಿ ಮತ ಹಾಕಿದ್ದಾರೆ.

9/11ರ ದಾಳಿಯ ಬಳಿಕ, ಶಂಕಿತ ಭಯೋತ್ಪಾದಕರ ವಿಚಾರಣೆಯಲ್ಲಿ ಸಿಐಎ ಹಲವು ಚಿತ್ರಹಿಂಸಾ ವಿಧಾನಗಳನ್ನು ಬಳಸಿದ್ದು, ಅದರಲ್ಲಿ ಹ್ಯಾಸ್ಪೆಲ್‌ರ ಪಾತ್ರವಿತ್ತು ಎಂಬ ಆರೋಪಗಳಿವೆ.

54-45ರ ಅಂತರದಲ್ಲಿ ಹ್ಯಾಸ್ಪೆಲ್‌ರ ನೇಮಕಾತಿಯನ್ನು ಸೆನೆಟ್ ಅಂಗೀಕರಿಸಿತು. ಇದು ಸುಮಾರು 7 ದಶಕಗಳ ಅವಧಿಯಲ್ಲಿ ಸೆನೆಟ್‌ನಲ್ಲಿ ಸಿಐಎ ಮುಖ್ಯಸ್ಥರೊಬ್ಬರು ಅಂಗೀಕಾರಗೊಂಡ ಕನಿಷ್ಠ ಅಂತರವಾಗಿದೆ.

61 ವರ್ಷದ ಹ್ಯಾಸ್ಪೆಲ್ ತನ್ನ 33 ವರ್ಷಗಳ ಸಿಐಎ ವೃತ್ತಿಯಲ್ಲಿ ಹೆಚ್ಚಿನ ಭಾಗವನ್ನು ಗೂಢಚಾರಿಣಿಯಾಗಿಯೇ ಕಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News