ಐಎಸ್‌ಐ ಪರ ಗೂಢಚಾರಿಕೆ: ಮಾಧುರಿ ಗುಪ್ತಾಗೆ 3 ವರ್ಷ ಜೈಲುಶಿಕ್ಷೆ

Update: 2018-05-19 18:16 GMT

ಹೊಸದಿಲ್ಲಿ, ಮೇ 19: ಪಾಕಿಸ್ತಾನದ ಐಎಸ್‌ಐ ಪರ ಗೂಢಚಾರಿಕೆ ನಡೆಸುತ್ತಿದ್ದ ಪ್ರಕರಣದಲ್ಲಿ ಅಪರಾಧಿಯಾಗಿರುವ ಭಾರತದ ಮಾಜಿ ರಾಜತಾಂತ್ರಿಕ ಅಧಿಕಾರಿ ಮಾಧುರಿ ಗುಪ್ತಾಗೆ ದಿಲ್ಲಿಯ ನ್ಯಾಯಾಲಯವೊಂದು 3 ವರ್ಷದ ಜೈಲುಶಿಕ್ಷೆ ವಿಧಿಸಿದೆ.

ಇಸ್ಲಮಾಬಾದ್‌ನ ಭಾರತೀಯ ಹೈಕಮಿಷನ್‌ನಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಮಾಧುರಿಯನ್ನು ಸರಕಾರಿ ಗೌಪ್ಯ ಕಾಯ್ದೆಯ ವಿವಿಧ ಪರಿಚ್ಛೇದಗಳಡಿ ದೋಷಿ ಎಂದು ಘೋಷಿಸಲಾಗಿತ್ತು. ಪಾಕಿಸ್ತಾನಿ ಅಧಿಕಾರಿಗಳಿಗೆ ಮಹತ್ವದ ಮಾಹಿತಿಗಳನ್ನು ರವಾನಿಸಿದ ಹಾಗೂ ಇಬ್ಬರು ಐಎಸ್‌ಐ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಆರೋಪದಲ್ಲಿ 2010ರ ಎಪ್ರಿಲ್ 22ರಂದು ದಿಲ್ಲಿ ಪೊಲೀಸರ ವಿಶೇಷ ತಂಡ ಮಾಧುರಿಯನ್ನು ಬಂಧಿಸಿತ್ತು.

ಅಪರಾಧಿಯು ಕಳಿಸಿರುವ ಇ-ಮೇಲ್‌ನಲ್ಲಿ ಮಹತ್ವದ ಮಾಹಿತಿಗಳಿದ್ದು ಇದರಿಂದ ಶತ್ರುದೇಶಕ್ಕೆ ಅನುಕೂಲವಾಗುವ ಸಾಧ್ಯತೆಗಳಿವೆ ಎಂದು ತಿಳಿಸಿರುವ ನ್ಯಾಯಾಲಯ, ಸರಕಾರಿ ಗೋಪ್ಯತೆ ಕಾಯ್ದೆಯ 3 ಮತ್ತು 5ನೇ ಪರಿಚ್ಛೇದದಡಿ ಮಾಧುರಿಯನ್ನು ದೋಷಿ ಎಂದು ಪರಿಗಣಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News