ಗುರ್‌ಗಾಂವ್: ಮಗಳ ಮೇಲೆ ತಂದೆಯಿಂದ ನಿರಂತರ ಅತ್ಯಾಚಾರ

Update: 2018-05-20 05:29 GMT

ಗುರ್‌ಗಾಂವ್, ಮೇ 20: ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲೆ ಆರು ತಿಂಗಳ ಕಾಲ ನಿರಂತರ ಅತ್ಯಾಚಾರ ಎಸಗಿದ ರಾಕ್ಷಸಿ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿ ತಂದೆಯನ್ನು ಬಂಧಿಸಲಾಗಿದೆ.

ಪಕ್ಕದ ಪಟೌಡಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 13 ವರ್ಷದ ಪುತ್ರಿಯ ಮೇಲೆ ಸತತವಾಗಿ ಅತ್ಯಾಚಾರ ಎಸಗುತ್ತಿದ್ದ ಎನ್ನಲಾಗಿದೆ. ಜತೆಗೆ ಮಗಳ ಜತೆ ತಂದೆ ಲೈಂಗಿಕ ಸಂಪರ್ಕ ಹೊಂದುವುದು ಮಾಮೂಲಿ. ಈ ಬಗ್ಗೆ ಭಯಪಡುವುದು ಅನಗತ್ಯ ಎಂದು ಬಾಲಕಿಯನ್ನು ನಂಬಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಎರಡನೇ ಪತ್ನಿ ಹಾಗೂ ಸಂತ್ರಸ್ತೆ ಸೇರಿದಂತೆ ನಾಲ್ವರು ಮಕ್ಕಳೊಂದಿಗೆ ವಾಸವಿದ್ದ. ಸಂತ್ರಸ್ತ ಬಾಲಕಿ ಮೊದಲ ಪತ್ನಿಯ ಪುತ್ರಿ. "ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಲಾಗಿದೆ. ಈ ಬಗ್ಗೆ ಆತನಿಗೆ ಯಾವ ವಿಷಾದವೂ ಇಲ್ಲ. ಆತ ಮಾಮೂಲಿನಂತೆ ವರ್ತಿಸಿದ್ದಾನೆ. ಅತಂಕಕಾರಿ ವಿಚಾರವೆಂದರೆ, ಪ್ರತಿ ಮನೆಯಲ್ಲೂ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂದು ಬಾಲಕಿಯನ್ನು ನಂಬಿಸಿದ್ದ" ಎಂದು ಠಾಣಾಧಿಕಾರಿ ಪೂನಮ್ ಸಿಂಗ್ ಹೇಳಿದ್ದಾರೆ. ಬಾಲಕಿಯ ಮೇಲೆ ಆರು ತಿಂಗಳಿಂದ ದೌರ್ಜನ್ಯ ಎಸಗುತ್ತಿದ್ದ ಈತ ಬಾಲಕಿಗೆ ಬೆದರಿಕೆಯನ್ನೂ ಹಾಕಿದ್ದ ಎನ್ನಲಾಗಿದೆ.

ಬಾಲಕಿ ಈ ಬಗ್ಗೆ ತನ್ನ ತಾಯಿಗೆ ದೂರು ನೀಡಿದ್ದು, ಇದನ್ನು ಆಕೆ ನಂಬಿರಲಿಲ್ಲ. ಶುಕ್ರವಾರ ಇದನ್ನು ಪರಿಶೀಲಿಸುವ ಸಲುವಾಗಿ ಕೆಲಸದಿಂದ ಬೇಗ ಮನೆಗೆ ಬಂದಳು. ತಂದೆ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದು ನೋಡಿ ಆಕೆಗೆ ಆಘಾತವಾಯಿತು ಎಂದು ಪೊಲೀಸರು ಹೇಳಿದ್ದಾರೆ. ಘಟನೆಯನ್ನು ನೋಡಿದ ತಕ್ಷಣ ಎರಡನೇ ಪತ್ನಿ ಠಾಣೆಗೆ ಬಂದು ಧೈರ್ಯವಾಗಿ ದೂರು ನೀಡಿದಳು ಎಂದು ಪೊಲೀಸರು ವಿವರಿಸಿದ್ದಾರೆ. ಬಿಹಾರ ಮೂಲದ ವ್ಯಕ್ತಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News