ಪಾಕ್: ಕೃಷ್ಣ ದೇವಾಲಯ ನವೀಕರಣಕ್ಕೆ 2 ಕೋಟಿ ರೂ. ಬಿಡುಗಡೆ

Update: 2018-05-20 17:20 GMT

ಇಸ್ಲಾಮಾಬಾದ್, ಮೇ 20: ರಾವಲ್ಪಿಂಡಿ ನಗರದಲ್ಲಿರುವ ಕೃಷ್ಣ ದೇವಾಲಯವನ್ನು ನವೀಕರಿಸಲು ಹಾಗೂ ಹಬ್ಬಗಳು ಮತ್ತು ಧಾರ್ಮಿಕ ಉತ್ಸವಗಳ ಸಂದರ್ಭಗಳಲ್ಲಿ ಹೆಚ್ಚಿನ ಭಕ್ತರಿಗೆ ಅವಕಾಶ ಕಲ್ಪಿಸುವುದಕ್ಕಾಗಿ ವಿಸ್ತರಿಸಲು ಪಾಕಿಸ್ತಾನದ ಪಂಜಾಬ್ ಸರಕಾರವು 2 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಮಾಧ್ಯಮ ವರದಿಯೊಂದು ರವಿವಾರ ತಿಳಿಸಿದೆ.

  ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ಅವಳಿ ನಗರಗಳಲ್ಲಿ ಕೃಷ್ಣ ದೇವಾಲಯ ಮಾತ್ರ ಕಾರ್ಯನಿರ್ವಹಿಸುತ್ತಿರುವ ಹಿಂದೂ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಪೂಜೆ ನಡೆಯುತ್ತದೆ. ಅಲ್ಲಿ 6-7 ಮಂದಿ ಸಿಬ್ಬಂದಿ ಇದ್ದಾರೆ.

ಪಂಜಾಬ್ ಪ್ರಾಂತೀಯ ವಿಧಾನಸಭೆಯ ಸದಸ್ಯರೋರ್ವರ ಮನವಿಯಂತೆ ದೇವಾಲಯವನ್ನು ನವೀಕರಿಸಲು ಸರಕಾರ 2 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಇವೇಕ್ವೀ ಟ್ರಸ್ಟ್ ಪ್ರಾಪರ್ಟಿ ಬೋರ್ಡ್‌ನ ಉಪ ಆಡಳಿತಗಾರ ಮುಹಮ್ಮದ್ ಆಸಿಫ್ ತಿಳಿಸಿದರು ಎಂದು ‘ಡಾನ್’ ವರದಿ ಮಾಡಿದೆ.

ಈ ಸಣ್ಣ ದೇವಾಲಯವನ್ನು 1897ರಲ್ಲಿ ಕಣಜಿ ಮಾಲ್ ಮತ್ತು ಉಜಗರ್ ಮಾಲ್ ರಾಮ್ ರಚ್‌ಪಾಲ್ ನಿರ್ಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News