ಸಿರಿಯ: ಕೊನೆಯ ಬಂಡುಕೋರ ಪ್ರದೇಶ ತೊರೆದ ಐಸಿಸ್ ಉಗ್ರರು

Update: 2018-05-20 17:21 GMT

ಬೈರೂತ್ (ಲೆಬನಾನ್), ಮೇ 20: ಸಿರಿಯ ರಾಜಧಾನಿ ಡಮಾಸ್ಕಸ್ ಸಮೀಪದ ಕೊನೆಯ ಬಂಡುಕೋರ ಪ್ರದೇಶವನ್ನು ಐಸಿಸ್ ಉಗ್ರರ ಗುಂಪೊಂದು ತೊರೆದಿದೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ. ಇದರೊಂದಿಗೆ, ಈ ಪ್ರದೇಶದ ಮೇಲೆ ಸರಕಾರಕ್ಕೆ ಸಂಪೂರ್ಣ ನಿಯಂತ್ರಣ ಲಭಿಸಿದೆ.

ಯರ್ಮುಕ್‌ನಲ್ಲಿರುವ ಫೆಲೆಸ್ತೀನ್ ನಿರಾಶ್ರಿತ ಶಿಬಿರದ ಸಮೀಪವಿರುವ ಈ ಪ್ರದೇಶದಿಂದ ಉಗ್ರರನ್ನು ಹೊರಹೋಗಲು ಬಿಟ್ಟ ಒಪ್ಪಂದದ ಬಗ್ಗೆ ಸಿರಿಯ ಸರಕಾರಿ ಮಾಧ್ಯಮ ಯಾವುದೇ ಹೇಳಿಕೆ ನೀಡಿಲ್ಲ. ಈ ಬಗ್ಗೆ ಒಪ್ಪಂದವೊಂದು ನಡೆದಿದೆ ಎಂಬ ವರದಿಗಳನ್ನು ಸಿರಿಯದ ಸೇನಾ ಮೂಲವೊಂದು ನಿರಾಕರಿಸಿದೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ.

ಉಗ್ರರು ಮತ್ತು ಅವರ ಕುಟುಂಬಗಳನ್ನು ಕರೆದುಕೊಂಡು ಹೋಗಲು ಮಧ್ಯರಾತ್ರಿಯ ಬಳಿಕ ಬಸ್‌ಗಳು ಅಲ್ಲಿಗೆ ತಲುಪಿವೆ ಎಂದು ವೀಕ್ಷಣಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News