ನ್ಯೂಯಾರ್ಕ್ ಪೊಲೀಸ್‌ಗೆ ಪ್ರಥಮ ಪೇಟಧಾರಿ ಸಿಖ್ ಮಹಿಳೆ ನೇಮಕ

Update: 2018-05-20 17:47 GMT

ನ್ಯೂಯಾರ್ಕ್, ಮೇ 20: ನ್ಯೂಯಾರ್ಕ್ ಪೊಲೀಸ್ ಇಲಾಖೆಗೆ ಪೇಟಧಾರಿ ಸಿಖ್ ಮಹಿಳೆಯೊಬ್ಬರ ನೇಮಕವಾಗಿದೆ.

ಗುರ್‌ಸೋಚ್ ಕೌರ್ ಆಕ್ಸಿಲಿಯರಿ ಪೊಲೀಸ್ ಅಧಿಕಾರಿ (ಎಪಿಒ)ಯಾಗಿ ನ್ಯೂಯಾರ್ಕ್ ಪೊಲೀಸ್ ಇಲಾಖೆಗೆ ಸೇರ್ಪಡೆಗೊಳ್ಳಲಿದ್ದಾರೆ. ಅವರು ಕಳೆದ ವಾರ ನ್ಯೂಯಾರ್ಕ್ ಸಿಟಿ ಪೊಲೀಸ್ ಅಕಾಡೆಮಿಯಿಂದ ಪದವಿ ಪಡೆದಿದ್ದಾರೆ.

‘‘ನ್ಯೂಯಾರ್ಕ್ ಪೊಲೀಸ್ ಇಲಾಖೆಯಲ್ಲಿ ಪ್ರಥಮ ಪೇಟಧಾರಿ ಸಿಖ್ ಮಹಿಳಾ ಆಕ್ಸಿಲಿಯರಿ ಪೊಲೀಸ್ ಅಧಿಕಾರಿಯನ್ನು ಸ್ವಾಗತಿಸಲು ನಾವು ಹೆಮ್ಮೆ ಪಡುತ್ತೇವೆ. ಎಪಿಒ ಗುರ್‌ಸೋಚ್ ಕೌರ್ ಮತ್ತು ಇತರ ಆಕ್ಸಿಲಿಯರಿ ಪೊಲೀಸ್ ಅಧಿಕಾರಿಗಳು ಅಕಾಡೆಮಿಯಿಂದ ಪದವಿ ಪಡೆದಿದ್ದಾರೆ. ನಾವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ. ಸುರಕ್ಷಿತವಾಗಿರಿ’’ ಎಂಬುದಾಗಿ ಸಿಖ್ ಆಫೀಸರ್ಸ್ ಅಸೋಸಿಯೇಶನ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News