ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ

Update: 2018-05-21 16:57 GMT

ಭುವನೇಶ್ವರ, ಮೇ 16: ಜೀವಿತಾವಧಿಯನ್ನು 10ರಿಂದ 15 ವರ್ಷಗಳಿಗೆ ಹೆಚ್ಚಿಸುವ ಗುರಿಯೊಂದಿಗೆ ಭಾರತ ಮೊದಲ ಬಾರಿಗೆ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ಸೋಮವಾರ ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಿತು. ಒರಿಸ್ಸಾ ಕರಾವಳಿಗುಂಟದ ಚಂಡಿಪುರದ ಸಮಗ್ರ ಪರೀಕ್ಷಾ ವಲಯದಲ್ಲಿರುವ ಸಂಚಾರಿ ಉಡಾವಕದ ಮೂಲಕ ಪೂರ್ವಾಹ್ನ 10.44ಕ್ಕೆ ಕ್ಷಿಪಣಿಯನ್ನು ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು ಎಂದು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಘಟನೆ ಮೂಲಗಳು ತಿಳಿಸಿವೆ. ಕ್ರೂಸ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ ಬ್ರಹ್ಮೋಸ್ ತಂಡ ಹಾಗೂ ಡಿಆರ್‌ಡಿಒಗೆ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಅಭಿನಂದನೆ ಸಲ್ಲಿಸಿದ್ದಾರೆ. ಜೀವಿತಾವಧಿಯನ್ನು 10ರಿಂದ 15 ವರ್ಷ ವಿಸ್ತರಿಸಲಾದ ಭಾರತದ ಮೊದಲ ಕ್ಷಿಪಣಿ ಈ ಬ್ರಹ್ಮೋಸ್.

ಭಾರತದ ಸೇನಾ ಪಡೆಯ ದಾಸ್ತಾನಿನಲ್ಲಿ ಈಗಿರುವ ಕ್ಷಿಪಣಿಗೆ ಬದಲು ಬೇರೆ ಕ್ಷಿಪಣಿಯನ್ನು ಹೊಂದುವ ವೆಚ್ಚವನ್ನು ಈ ಯಶಸ್ವಿ ಪ್ರಯೋಗ ಉಳಿಸಿದೆ ಎಂದು ರಕ್ಷಣಾ ಸಚಿವರು ಟ್ವೀಟ್ ಮಾಡಿದ್ದಾರೆ. ಭಾರತದ ಸೇನೆ ತನ್ನ ಶಸ್ತ್ರಾಗಾರಕ್ಕೆ ಬ್ರಹ್ಮೋಸ್‌ನ 3 ರೆಜಿಮಂಟ್ ಅನ್ನು ಈಗಾಗಲೇ ನಿಯೋಜಿಸಿದೆ. ಎಲ್ಲವೂ ಕ್ಷಿಪಣಿಯ ಬ್ಲಾಕ್-3ನ್ನು ಹೊಂದಿದೆ. ಬ್ರಹ್ಮೋಸ್‌ನ ಭೂ ದಾಳಿ ಆವೃತ್ತಿಯು ಭಾರತದ ಸೇನೆಯಲ್ಲಿ 2007ರಿಂದ ಕಾರ್ಯಾಚರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News