ವೆನೆಝುವೆಲ: ಮಡುರೊ ಮರು ಆಯ್ಕೆ

Update: 2018-05-21 18:04 GMT

ಕ್ಯಾರಕಸ್ (ವೆನೆಝುವೆಲ), ಮೇ 21: ವೆನೆಝುವೆಲದ ಅಧ್ಯಕ್ಷ ನಿಕೊಲಸ್ ಮಡುರೊ ರವಿವಾರ ನಡೆದ ಚುನಾವಣೆಯಲ್ಲಿ ಆರು ವರ್ಷಗಳ ಅವಧಿಗೆ ಮರು ಆಯ್ಕೆಯಾಗಿದ್ದಾರೆ.

ಆದರೆ, ಪ್ರತಿಪಕ್ಷಗಳು ಈ ಫಲಿತಾಂಶವನ್ನು ತಿರಸ್ಕರಿಸಿವೆ. ಚುನಾವಣಾ ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರಗಳನ್ನು ನಡೆಸಲಾಗಿದ್ದು, ಇದು ಸರ್ವಾಧಿಕಾರಿಯೊಬ್ಬನನ್ನು ಅಧಿಕಾರಕ್ಕೆ ಕಳುಹಿಸುವ ಪ್ರಹಸನವಾಗಿದೆ ಎಂದು ಅವು ಬಣ್ಣಿಸಿವೆ.

55 ವರ್ಷದ ಮಾಜಿ ಬಸ್ ಚಾಲಕ ಮಡುರೊ, 2013ರಲ್ಲಿ ಕ್ಯಾನ್ಸರ್‌ನಿಂದಾಗಿ ಹ್ಯೂಗೊ ಚವೇಝ್ ನಿಧನರಾದ ಬಳಿಕ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಮಡುರೊ 58 ಲಕ್ಷ ಮತಗಳನ್ನು ಪಡೆದಿದ್ದಾರೆ ಹಾಗೂ ಅವರ ನಿಕಟ ಎದುರಾಳಿ ಹೆನ್ರಿ ಫಾಲ್ಕನ್ 18 ಲಕ್ಷ ಮತಗಳನ್ನು ಗಳಿಸಿದ್ದಾರೆ ಎಂದು ವೆನೆಝುವೆಲದ ಚುನಾವಣಾ ಆಯೋಗ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News