ಉತ್ತರ ಪ್ರದೇಶ: ನ್ಯಾಯಾಂಗ ಮೀರಿದ ಹತ್ಯೆಗಳ ತನಿಖೆಯ ಅಗತ್ಯ

Update: 2018-05-22 18:38 GMT

ಭಾಗ-1

ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಮತ್ತು ಸಿಎಎಚ್‌ನ ಪ್ರತಿನಿಧಿಗಳು ಸಂತ್ರಸ್ತರ ಕುಟುಂಬಗಳ ಪರವಾಗಿ ಮಾನವ ಹಕ್ಕು ಆಯೋಗದ(ಎನ್‌ಎಚ್‌ಆರ್‌ಪಿಯ) ಅಧ್ಯಕ್ಷ ಎಚ್‌ಎಲ್ ದತ್ತುರವರನ್ನು ಮೇ 7ರಂದು ಭೇಟಿಯಾಗಿ ಸಂತ್ರಸ್ತ ಕುಟುಂಬಗಳ ಸದಸ್ಯರ ದೂರುಗಳು ಹಾಗೂ ತಾವು ಪತ್ತೆಹಚ್ಚಿರುವ ವಿಷಯಗಳ ಕುರಿತು ವಿವರಿಸಿದ್ದರು. ಇದಾದ ಬಳಿಕ ಮಾನವ ಹಕ್ಕು ಆಯೋಗದ ಆಜ್ಞೆ ಹೊರಬಿದ್ದಿದೆ.

 ಉತ್ತರ ಪ್ರದೇಶದಲ್ಲಿ ‘ನ್ಯಾಯಾಂಗ-ಮೀರಿದ(ಎಕ್ಸ್‌ಟ್ರಾ ಜುಡೀಶಿಯಲ್)ಹತ್ಯೆ’ಗಳಿಗೆ ಬಲಿಪಶುಗಳಾದ ಒಂಬತ್ತು ಮಂದಿಯ ಕುಟುಂಬದ ಸದ್ಯಸರು ಸಲ್ಲಿಸಿದ್ದ ಅರ್ಜಿಗಳನ್ನು ಪರಿಗಣಿಸಿ, ರಾಷ್ಟ್ರೀಯ ಮಾನವ ಹಕ್ಕು ಆಯೋಗವು, ಯುಪಿಯ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ‘‘ಸಿಟಿಜೆನ್ಸ್ ಅಗೈನ್ಸ್‌ಟ್ ಹೇಟ್’’ (ಸಿಎಎಚ್)ಸಲ್ಲಿಸಿರುವ ವರದಿಯಲ್ಲಿರುವ ಒಟ್ಟು 23 ಎನ್‌ಕೌಂಟರ್ ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲ ವರದಿಗಳನ್ನು ತನಗೆ (ಆಯೋಗಕ್ಕೆ)ಸಲ್ಲಿಸುವಂತೆ ಆದೇಶಿಸಿದೆ. ಸಿಎಎಚ್ ಪತ್ತೆ ಮಾಡಿರುವ ಎಂಟು ಹತ್ಯೆಗಳೂ ಈ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿವೆ. ಅಲ್ಲದೆ, ಆಯೋಗವು ಎಲ್ಲ ಹದಿನೇಳು ಹತ್ಯೆಗಳ ವಿಚಾರಣೆ ನಡೆಸಲು ತನ್ನದೇ ಮಹಾನಿರ್ದೇಶಕರಿಗೆ ಒಂದು ತಂಡವನ್ನು ರಚಿಸುವಂತೆಯೂ ಆಜ್ಞೆಮಾಡಿದೆ.

ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಮತ್ತು ಸಿಎಎಚ್‌ನ ಪ್ರತಿನಿಧಿಗಳು ಸಂತ್ರಸ್ತರ ಕುಟುಂಬಗಳ ಪರವಾಗಿ ಮಾನವ ಹಕ್ಕು ಆಯೋಗದ(ಎನ್‌ಎಚ್‌ಆರ್‌ಪಿಯ) ಅಧ್ಯಕ್ಷ ಎಚ್‌ಎಲ್ ದತ್ತುರವರನ್ನು ಮೇ 7ರಂದು ಭೇಟಿಯಾಗಿ ಸಂತ್ರಸ್ತ ಕುಟುಂಬಗಳ ಸದಸ್ಯರ ದೂರುಗಳು ಹಾಗೂ ತಾವು ಪತ್ತೆಹಚ್ಚಿರುವ ವಿಷಯಗಳ ಕುರಿತು ವಿವರಿಸಿದ್ದರು. ಇದಾದ ಬಳಿಕ ಮಾನವ ಹಕ್ಕು ಆಯೋಗದ ಆಜ್ಞೆ ಹೊರಬಿದ್ದಿದೆ.
ಭೇಟಿಯ ವೇಳೆ, ಕುಟುಂಬಗಳ ಸದಸ್ಯರು ಒಂಬತ್ತು ಎಕ್ಸ್ ಟ್ರಾ ಜುಡೀಶಿಯಲ್ ಹತ್ಯೆಗಳ ಬಗ್ಗೆ ದೂರು ನೀಡಿದ್ದಲ್ಲದೆ, ಪೊಲೀಸರು ಹೇಳಿರುವ ‘ಎನ್‌ಕೌಂಟರ್‌ಹತ್ಯೆ’ಗಳು ನಿಜವಾಗಿ ಎನ್‌ಕೌಂಟರ್ ಹತ್ಯೆಗಳಲ್ಲ; ಅವು ಉದ್ದೇಶ ಪೂರ್ವಕವಾಗಿ, ಪೂರ್ವಸಿದ್ಧತೆಗಳೂಂದಿಗೆ ನಡೆದ ಹತ್ಯೆಗಳು ಎನ್ನುವುದನ್ನು ಸಾಬೀತುಪಡಿಸಲು ಬೇಕಾದ ದಾಖಲೆಗಳನ್ನು ನೀಡಿದರು. ಇತರ ಎಂಟು ಹತ್ಯೆ ಪ್ರಕರಣಗಳಲ್ಲಿ ಪೊಲೀಸ್ ಬೆದರಿಕೆಗಳಿಗೊಳಗಾಗಿ ಹೇಳಿಕೆಗಳನ್ನಾಗಲಿ, ಅಫಿದವಿತ್‌ಗಳನ್ನಾಗಲಿ ನೀಡಲು ಅಸಮರ್ಥರಾಗಿದ್ದ ಸಂತ್ರಸ್ತರ ಪರವಾಗಿ ನಾಗರಿಕ ಸಮಾಜದ ಸಂಘಟನೆಗಳು ಸತ್ಯಶೋಧ ನಡೆಸಿದ್ದವು.
ಭೂಷಣ್ ಮತ್ತು ಸಿಎಎಚ್ ಜಂಟಿಯಾಗಿ ನೀಡಿರುವ ಹೇಳಿಕೆಯಲ್ಲಿ ಹೀಗೆ ಹೇಳಲಾಗಿದೆ; ‘‘ಎನ್‌ಕೌಂಟರ್‌ಗಳೆನ್ನಲಾದ ಆ ಹತ್ಯೆಗಳು ಸ್ವಯಂಸ್ಫೂರ್ತ ಶೂಟ್‌ಔಟ್‌ಗಳಲ್ಲ, ಬದಲಾಗಿ ಯೋಜಿತವಾದ ಹಾಗೂ ಪೂರ್ವನಿರ್ಧರಿತವಾದ ಎಕ್ಸ್‌ಟ್ರಾ- ಜುಡೀಶಿಯಲ್ ಹತ್ಯೆಗಳು.’’
ಈ ಹತ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಆಯೋಗದ ಮುಂದೆ ಇಟ್ಟಿರುವ 17 ಹತ್ಯಾ ಪ್ರಕರಣಗಳಲ್ಲಿ, ಎನ್‌ಕೌಂಟರ್ ಸಾವುಗಳ ಬಗ್ಗೆ ಸುಪ್ರೀಂ ಕೋರ್ಟ್ ಮತ್ತು ಮಾನವ ಹಕ್ಕು ಆಯೋಗದ ಮಾರ್ಗದರ್ಶಿ ನಿಯಮಾನುಸಾರ ಸಂಬಂಧಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ದೂರುದಾರರು ಮಾನವ ಹಕ್ಕು ಆಯೋಗವನ್ನು ಒತ್ತಾಯಿಸಿದ್ದಾರೆ.
ಮೇ 9 ರಂದು ಮಾನವಹಕ್ಕು ಆಯೋಗ ಹೊರಡಿಸಿದ ಆಜ್ಞೆ ಮತ್ತು ನೋಟಿಸ್‌ನಲ್ಲಿ ಹೀಗೆ ಹೇಳಲಾಗಿದೆ. ‘‘ದೂರುಗಳನ್ನು ಮತ್ತು ದೂರುಗಳ ಜತೆ ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸುಪ್ರೀಂ ಕೋರ್ಟ್ ಬಹುರಾಷ್ಟ್ರೀಯ ಮಾನವ ಹಕ್ಕು ಆಯೋಗವು ಎನ್‌ಕೌಂಟರ್ ಸಾವುಗಳ ಬಗ್ಗೆ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವಲ್ಲಿ ರಾಜ್ಯ ಸರಕಾರವು ವಿಫಲವಾಗಿರುವ ಸಾಧ್ಯತೆಗಳಿವೆ ಎನ್ನಬಹುದಾಗಿದೆ’’.
ಆಯೋಗವು 2017ರ ನವೆಂಬರ್ 22ರಂದು ಉತ್ತರಪ್ರದೇಶ ಸರಕಾರಕ್ಕೆ ನೀಡಿದ ಆಜ್ಞೆಯೊಂದರಲ್ಲಿ ರಾಜ್ಯದ ಪೊಲೀಸ್ ಸಿಬ್ಬಂದಿ ತಮ್ಮ ಅಧಿಕಾರಗಳನ್ನು ದುರುಪಯೋಗ ಪಡಿಸಿಕೊಂಡಿರುವಂತೆ ತೋರುತ್ತದೆ ಎಂದಿದೆ.

ಐವರು ಸದಸ್ಯರ ವಿಚಾರಣಾ ತಂಡದಿಂದ 17 ಎಕ್ಸ್‌ಟ್ರಾ ಜುಡೀಶಿಯಲ್ ಹತ್ಯೆಗಳ ವಿಚಾರಣೆ

ವಿಚಾರಣಾ ತಂಡದಿಂದ ಓರ್ವ ಹಿರಿಯ ಎಸ್ಪಿ, ಇಬ್ಬರು ಡೆಪ್ಯೂಟಿ ಎಸ್ಪಿಗಳು ಮತ್ತು ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್‌ಗಳಿದ್ದು ಸತ್ಯಶೋಧಕ ವಿಚಾರಣೆಯೊಂದನ್ನು ನಡೆಸಲಿದ್ದಾರೆ. ಇವರು ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸಲಾಗಿರುವ ದಾಖಲೆಗಳನ್ನು ಪ್ರಥಮ ಮಾಹಿತಿ ವರದಿ (ಎಫ್‌ಐಆರ್)ಗಳು, ಮರಣೋತ್ತರ ಪರೀಕ್ಷಾ ವರದಿಗಳು, ಪೊಲೀಸರ ಜನರಲ್ ಡೈರಿ ಎಂಟ್ರಿಗಳು ಇತ್ಯಾದಿಗಳನ್ನು ಪರಿಶೀಲಿಸಲಿದ್ದಾರೆ ಮತ್ತು ನಾಲ್ಕು ವಾರಗಳೊಳಗಾಗಿ ಆಯೋಗಕ್ಕೆ ವರದಿ ಸಲ್ಲಿಸಲಿದ್ದಾರೆ. ಮಾನವ ಹಕ್ಕು ಆಯೋಗದ ಪ್ರಕಾರ, 17 ಎಕ್ಸ್‌ಟ್ರಾ ಜುಡೀಶಿಯಲ್ ಹತ್ಯೆಗಳ ಪೈಕಿ 15 ಹತ್ಯಾ ಪ್ರಕರಣಗಳಲ್ಲಿ ಈಗಾಗಲೇ ವರದಿಗಳನ್ನು ಕೇಳಲಾಗಿದೆ. ಇನ್ನೆರಡು ಪ್ರಕರಣಗಳನ್ನು ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗಳಿಗೆ ನೋಟಿಸ್‌ಗಳನ್ನು ನೀಡುವ ಮೂಲಕ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಸಂಬಂಧಿತ ವಿಚಾರಣಾಧಿಕಾರಿಗಳಿಗೆ, ಎಲ್ಲ 17 ಎನ್‌ಕೌಂಟರ್ ಎನ್ನಲಾದ ಹತ್ಯೆಗಳಲ್ಲಿ ಸೂಕ್ತ ಸೂಚನೆಗಳನ್ನು ನೀಡುವಂತೆ ಹೇಳಲಾಗಿದೆ. ಆಯೋಗಕ್ಕೆ ಸಲ್ಲಿಸುವ ದಾಖಲೆಗಳಲ್ಲಿ ನಿರ್ದಿಷ್ಟವಾಗಿ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವಂತೆ ಆಜ್ಞಾಪಿಸಲಾಗಿದೆ. (1)ಸಂಬಂಧಿತ ಹತ್ಯಾ ಪ್ರಕರಣಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು (2) ಹತ್ಯೆಗಳಿಗೆ ಸಂಬಂಧಿಸಿದ ಆಪಾದನಾ ಪಟ್ಟಿಗಳು (3) ಘಟನೆ ನಡೆದ ದಿನದ ಸಂಬಂಧಪಟ್ಟ ಪೊಲೀಸ್ ಶಾಖೆಯ ಜನರಲ್/ದೈನಂದಿನ ಡೈರಿ ದಾಖಲೆ (4) ಸಂಬಂಧಿತ ಪೊಲೀಸ್ ಶಾಖೆಯ ವಯರ್‌ಲೆಸ್ ಲಾಗ್‌ಬುಕ್ (5) ಆ ದಿನದ ಲಾಗ್‌ಬುಕ್ ದಾಖಲೆಗಳು, ಸಂಬಂಧಿಸಿದ ಎನ್‌ಕೌಂಟರ್‌ಗಳಲ್ಲಿ ತೊಡಗಿದ್ದ ಎಲ್ಲ ಪೊಲೀಸ್ ಅಧಿಕಾರಿಗಳು ಬಳಸಿದ ಸರಕಾರಿ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳು (6) ಎನ್‌ಕೌಂಟರ್‌ನಲ್ಲಿ ಮೃತಪಟ್ಟವರು ಬಳಸಿದ್ದ ಮೊಬೈಲ್ ಫೋನ್‌ಗಳ ಮತ್ತು ಎನ್‌ಕೌಂಟರ್ ನಡೆದ ದಿನದ ಮೊದಲಿನ ಒಂದು ವಾರ ಮತ್ತು ಆ ದಿನದ ನಂತರದ ಒಂದು ವಾರದಲ್ಲಿ ಸಂಬಂಧಿತ ಎಲ್ಲ ಪೊಲೀಸ್ ಅಧಿಕಾರಿಗಳು ಬಳಸಿದ್ದ ಮೊಬೈಲ್ ಫೋನ್‌ಗಳ ಎಲ್ಲ ಕರೆಗಳ ವಿವರಗಳ ದಾಖಲೆಗಳು (ಸಿಡಿಆರ್) ಈ ಎಲ್ಲ ದಾಖಲೆಗಳನ್ನು ಮಾನವ ಹಕ್ಕು ಆಯೋಗಕ್ಕೆ ಆರು ವಾರಗಳೊಳಗೆ ಸಲ್ಲಿಸಬೇಕಾಗಿದೆ.

2017ರ ಮಾರ್ಚ್‌ನಿಂದ ಉತ್ತರಪ್ರದೇಶದಲ್ಲಿ 1,200 ಎನ್‌ಕೌಂಟರ್ ಪ್ರಕರಣಗಳು, 50 ಎನ್‌ಕೌಂಟರ್ ಹತ್ಯೆಗಳು 
‘ದೂರಿನಲ್ಲಿ ಹೇಳಲಾಗಿರುವಂತೆ ಉತ್ತರಪ್ರದೇಶದಲ್ಲಿ ಸರಕಾರವು ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡುವ ನೆಪದಲ್ಲಿ ಮುಗ್ಧ ಜನರನ್ನು ಬಲಿಪಶುಗಳನ್ನಾಗಿಸುವ ಒಂದು ಸರಣಿಯನ್ನೇ ಆರಂಭಿಸಿದೆ. ಮಾಧ್ಯಮಗಳ ವರದಿಗಳು ಹಾಗೂ ಸ್ವತಂತ್ರ ಸತ್ಯಸಂಶೋಧನೆಗಳ ಪ್ರಕಾರ 2017ರ ಮಾರ್ಚ್ ತಿಂಗಳಿಂದ 50 ಎನ್‌ಕೌಂಟರ್ ಹತ್ಯೆಗಳು ನಡೆದಿವೆ’ ಎಂದು ಮಾನವ ಹಕ್ಕು ಆಯೋಗ ಹೇಳಿದೆ.

ದೂರುಗಳನ್ನು ದಾಖಲಿಸಿರುವುದಕ್ಕಾಗಿ ಹತ್ಯೆಯಾದವರ ಕುಟುಂಬಗಳ ಸದಸ್ಯರಿಗೆ ಕಿರುಕುಳ ನೀಡಲಾಗಿದೆ. ‘‘ಉತ್ತರ ಪ್ರದೇಶದಲ್ಲಿ ಹಾಲಿ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ 1,200 ಪೊಲೀಸ್ ಎನ್‌ಕೌಂಟರ್ ಪ್ರಕರಣ ಗಳು ನಡೆದಿವೆ. ಆ ಬರ್ಬರ ಎಕ್ಸ್‌ಟ್ರಾ ಜುಡೀಶಿಯಲ್ ಹತ್ಯೆಗಳ ವಿರುದ್ಧ ಹತ್ಯೆಯಾದವರ ಕುಟುಂಬಗಳ ಸದಸ್ಯರು ಪೊಲೀಸರಿಗೆ ದೂರುಗಳನ್ನು ನೀಡಿದಾಗ, ಹಲವು ಸಂತ್ರಸ್ತರ ಕುಟುಂಬಗಳ ಸದಸ್ಯರಿಗೆ ಕಿರುಕುಳ ನೀಡಲಾಗಿದೆ ಹಾಗೂ ಬಲಿಪಶುಗಳನ್ನಾಗಿ ಮಾಡಲಾಗಿದೆ’’ ಎಂದು ಮಾನವ ಹಕ್ಕು ಆಯೋಗ ದಾಖಲಿಸಿದೆ.
thewire.in

Writer - ಗೌರವ್ ವಿವೇಕ್ ಭಾಟ್ನಗರ್

contributor

Editor - ಗೌರವ್ ವಿವೇಕ್ ಭಾಟ್ನಗರ್

contributor

Similar News

ಜಗದಗಲ
ಜಗ ದಗಲ