ಆರೋಗ್ಯ ಸೇವೆಯಲ್ಲಿ ಭಾರತಕ್ಕೆ 145ನೇ ಸ್ಥಾನ

Update: 2018-05-23 17:13 GMT

ಹೊಸದಿಲ್ಲಿ, ಮೇ 23: ಆರೋಗ್ಯ ಸೇವೆಯ ಗುಣಮಟ್ಟ ಹಾಗೂ ಲಭ್ಯತೆಯಲ್ಲಿ 195 ರಾಷ್ಟ್ರಗಳಲ್ಲಿ ಭಾರತ 145ನೇ ಸ್ಥಾನ ಪಡೆದುಕೊಂಡಿದೆ. ಚೀನಾ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಭೂತಾನ್‌ನಂತಹ ನೆರೆಯ ರಾಷ್ಟ್ರಗಳಿಗಿಂತ ಭಾರತ ಹಿಂದಿದೆ ಎಂದು ಲ್ಯಾನ್ಸೆಟ್ ಅಧ್ಯಯನ ಹೇಳಿದೆ. ಆದಾಗ್ಯೂ, 1990ರಿಂದ ಭಾರತದ ಆರೋಗ್ಯ ಸೇವೆ ಗುಣಮಟ್ಟ ಹಾಗೂ ಲಭ್ಯತೆಯಲ್ಲಿ ಸುಧಾರಣೆ ಸಾಧಿಸಿದೆ ಎಂದು ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ ಹೇಳಿದೆ.

ಆರೋಗ್ಯ ಸೇವೆ ಗುಣಮಟ್ಟ ಹಾಗೂ ಲಭ್ಯತೆಯಲ್ಲಿ ಭಾರತ 2016ರಲ್ಲಿ 41.12 ಅಂಕ ಗಳಿಸಿತ್ತು. ‘‘ಆದಾಗ್ಯೂ, ಆರೋಗ್ಯ ಸೇವೆ ಲಭ್ಯತೆಯಲ್ಲಿ ಸುಧಾರಣೆ ಹಾಗೂ ಗುಣಮಟ್ಟದ ಎಚ್‌ಎಕ್ಯೂ ಸೂಚ್ಯಾಂಕ 2000ದಿಂದ 2016ಕ್ಕೆ ತೀವ್ರ ಏರಿಕೆಯಾಗಿದೆ. ದೇಶಗಳ ನಡುವಿನ ಅತ್ಯಧಿಕ ಹಾಗೂ ಅತಿ ಕಡಿಮೆ ಅಂತರ ವಿಸ್ತಾರವಾಗಿದೆ (1990ರಲ್ಲಿ 23-4 ಅಂಕಗಳ ವ್ಯತ್ಯಾಸ ಹಾಗೂ 2016ರಲ್ಲಿ 30-8 ಅಂಕಗಳ ವ್ಯತ್ಯಾಸ)’’ ಎಂದು ಅಧ್ಯಯನ ತಿಳಿಸಿದೆ.

 ಗೋವಾ ಮತ್ತು ಕೇರಳ 2016ರಲ್ಲಿ ಅತ್ಯಧಿಕ ಅಂಕಗಳನ್ನು ಪಡೆದುಕೊಂಡಿತ್ತು. ಈ ರಾಜ್ಯಗಳ ಅಂಕ 60 ಮೀರಿತ್ತು ಆದರೆ, ಅಸ್ಸಾಂ ಹಾಗೂ ಉತ್ತರಪ್ರದೇಶದ ಅಂಕ ತೀರಾ ಕಡಿಮೆ ಇತ್ತು. ಈ ರಾಜ್ಯಗಳ ಅಂಕ 40ಕ್ಕಿಂತ ಕಡಿಮೆ ಇತ್ತು.

 ಭಾರತವು ಚೀನಾ (48), ಶ್ರೀಲಂಕಾ (71), ಬಾಂಗ್ಲಾದೇಶ (133), ಭೂತಾನ್ (134) ಗಿಂತ ಹಿಂದೆ ಇದೆ. ಈ ದೇಶಗಳ ಆರೋಗ್ಯ ಸೂಚ್ಯಾಂಕ ನೇಪಾಳ (149), ಪಾಕಿಸ್ತಾನ (154), ಅಫ್ಘಾನಿಸ್ತಾನ (191)ಕ್ಕಿಂತ ಉತ್ತಮವಾಗಿದೆ.

2016ರಲ್ಲಿ ಅತ್ಯುಚ್ಚ ಮಟ್ಟದ ಆರೋಗ್ಯ ಸೇವೆ ಲಭ್ಯತೆ ಹಾಗೂ ಗುಣಮಟ್ಟ ಇರುವ ದೇಶಗಳೆಂದರೆ ಐಲ್ಯಾಂಡ್ (97.1 ಅಂಕ), ನಾರ್ವೆ (96.6), ನೆದರ್‌ಲ್ಯಾಂಡ್ (96.1), ಲಕ್ಸಂಬರ್ಗ್ (96.0), ಫಿನ್‌ಲ್ಯಾಂಡ್ ಹಾಗೂ ಆಸ್ಟ್ರೇಲಿಯಾ (ತಲಾ 95.9)

ಕಡಿಮೆ ಅಂಗಳನ್ನು ಪಡೆದುಕೊಂಡ ದೇಶಗಳೆಂದರೆ ಸೆಂಟ್ರಲ್ ಆಫ್ರಿಕಾ ರಿಪಬ್ಲಿಕ್ (18.6), ಸೋಮಾಲಿಯಾ (19.0), ಗಿನಿಯಾ-ಬಿಸ್ಸಾವು (23.4), ಚಾಡ್ (25.4) ಹಾಗೂ ಅಫಘಾನಿಸ್ಥಾನ (25.9) ಎಂದು ಅಧ್ಯಯನ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News