ಮೋದಿಯವರ ಭಾಷಣದ ಪುಸ್ತಕ ಓದಲಿರುವ ರಾಜಸ್ತಾನದ ಐಎಎಸ್ ಅಧಿಕಾರಿಗಳು

Update: 2018-05-23 17:46 GMT

 ಜೈಪುರ, ಮೇ 23: ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಂದರ್ಭ ‘ಉತ್ತಮ ಆಡಳಿತ’ ವಿಷಯದ ಬಗ್ಗೆ ಮಾಡಿದ ಉಪನ್ಯಾಸವನ್ನು ಕೃತಿ ರೂಪದಲ್ಲಿ ಮುದ್ರಿಸಲಾಗಿದ್ದು ಇದನ್ನು ರಾಜಸ್ತಾನದ ಐಎಎಸ್ ಅಧಿಕಾರಿಗಳು ಓದಿ ಮನದಟ್ಟು ಮಾಡಿಕೊಳ್ಳಬೇಕಾಗಿದೆ ಎಂದು ರಾಜ್ಯ ಸರಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ನರೇಂದ್ರ ಮೋದಿ 2001ರಿಂದ 2014ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಉತ್ತಮ ಆಡಳಿತ, ನಿರ್ಧಾರ ಕೈಗೊಳ್ಳುವುದು ಹಾಗೂ ಸಮಯದ ನಿರ್ವಹಣೆ ವಿಷಯದ ಕುರಿತು ನೀಡಿದ್ದ ಉಪನ್ಯಾಸದ ಸಾರವನ್ನು ‘ಚಿಂತನ ಶಿಬಿರ’ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಗುಜರಾತ್ ಸರಕಾರದ ಸಿಬ್ಬಂದಿ ಸಚಿವಾಲಯದ ಕಾರ್ಯದರ್ಶಿ ಇದನ್ನು ರಾಜಸ್ತಾನ ಸರಕಾರದ ಸಿಬ್ಬಂದಿ ಸಚಿವಾಲಯದ ಕಾರ್ಯದರ್ಶಿಗೆ ಕಳುಹಿಸಿದ್ದಾರೆ.

  ರಾಜ್ಯ ಸರಕಾರದ ಅನುಮೋದನೆ ಪಡೆದ ಬಳಿಕ ಈ ಪುಸ್ತಕವನ್ನು ಐಎಎಸ್ ಅಧಿಕಾರಿಗಳಿಗೆ ಹಂಚಲಾಗುವುದು ಎಂದು ರಾಜಸ್ತಾನದ ಸಿಬ್ಬಂದಿ ಸಚಿವಾಲಯದ ಕಾರ್ಯದರ್ಶಿ ಭಾಸ್ಕರ್ ಎ.ಸಾವಂತ್ ತಿಳಿಸಿದ್ದಾರೆ. ಅಧಿಕಾರಿಗಳಿಗೆ ಪುಸ್ತಕ ಹಂಚಲು ಅನುಮತಿ ಕೋರಿ ಪತ್ರವೊಂದನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News