ಇರಾನ್ ಒಪ್ಪಂದಕ್ಕೆ ಜರ್ಮನಿ, ಚೀನಾ ಬದ್ಧ: ಮರ್ಕೆಲ್

Update: 2018-05-24 17:18 GMT

ಬೀಜಿಂಗ್, ಮೇ 24: ಇರಾನ್ ಜೊತೆಗಿನ 2015ರ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದರೂ, ಚೀನಾ ಮತ್ತು ಜರ್ಮನಿ ಒಪ್ಪಂದಕ್ಕೆ ಬದ್ಧವಾಗಿವೆ ಎಂದು ಜರ್ಮನ್ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಗುರುವಾರ ಹೇಳಿದ್ದಾರೆ.

ಚೀನಾಕ್ಕೆ ಎರಡು ದಿನಗಳ ಭೇಟಿ ನೀಡಿರುವ ಮರ್ಕೆಲ್, ರಾಜಧಾನಿ ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದ ಪೀಪಲ್‌ನಲ್ಲಿ ಚೀನಾ ಪ್ರಧಾನಿ ಲಿ ಕೆಕಿಯಾಂಗ್ ಜೊತೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News