ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇನ್ನೂ 2,500 ಮನೆಗಳ ನಿರ್ಮಾಣ: ಇಸ್ರೇಲ್

Update: 2018-05-24 17:20 GMT

ಜೆರುಸಲೇಂ, ಮೇ 24: ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಯಹೂದಿ ಕಾಲನಿಗಳಲ್ಲಿ ಸುಮಾರು 2,500 ನೂತನ ಮನೆಗಳನ್ನು ನಿರ್ಮಿಸಲು ಮುಂದಿನ ವಾರ ಅನುಮೋದನೆ ಕೋರುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಅವಿಗ್ಡರ್ ಲೈಬರ್‌ಮನ್ ಗುರುವಾರ ಹೇಳಿದ್ದಾರೆ.

ತಕ್ಷಣದ ನಿರ್ಮಾಣಕ್ಕಾಗಿ 1,400 ಮನೆಗಳನ್ನು ಮಂಜೂರು ಮಾಡುವಂತೆ ಪ್ರಾದೇಶಿಕ ಯೋಜನಾ ಮಂಡಳಿಗೆ ಕೋರಿಕೆ ಸಲ್ಲಿಸುವುದಾಗಿ ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.

 2014ರಿಂದ ಸ್ಥಗಿತಗೊಂಡಿರುವ ಇಸ್ರೇಲ್-ಫೆಲೆಸ್ತೀನ್ ಶಾಂತಿ ಮಾತುಕತೆಯ ಆರಂಭಕ್ಕೆ ಆಕ್ರಮಿತ ಫೆಲೆಸ್ತೀನ್ ನೆಲದಲ್ಲಿ ಇಸ್ರೇಲಿ ಮನೆಗಳ ನಿರ್ಮಾಣ ದೊಡ್ಡ ತಡೆಯಾಗಿದೆ.

ಭವಿಷ್ಯದ ಫೆಲೆಸ್ತೀನ್ ದೇಶಕ್ಕಾಗಿ ಪಶ್ಚಿಮ ದಂಡೆ, ಪೂರ್ವ ಜೆರುಸಲೇಂ ಮತ್ತು ಗಾಝಾ ಪಟ್ಟಿ ಅಗತ್ಯವಾಗಿದೆ ಎಂದು ಫೆಲೆಸ್ತೀನಿಯರು ಭಾವಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News