ಐರ್‌ಲ್ಯಾಂಡ್: ಗರ್ಭಪಾತ ನಿಷೇಧ ಜನಮತಗಣನೆ
Update: 2018-05-25 22:59 IST
ಡಬ್ಲಿನ್ (ಐರ್‌ಲ್ಯಾಂಡ್), ಮೇ 25: ದೇಶದ ಕಠಿಣ ಗರ್ಭಪಾತ ಕಾನೂನನ್ನು ಸಡಿಲಗೊಳಿಸಬೇಕೇ, ಬೇಡವೇ ಎಂಬ ಬಗ್ಗೆ ಐರ್‌ಲ್ಯಾಂಡ್‌ನಲ್ಲಿ ಶುಕ್ರವಾರ ಐತಿಹಾಸಿಕ ಜನಮತಗಣನೆ ನಡೆಯಿತು.
ಗರ್ಭಪಾತದ ಮೇಲಿನ ಸಾಂವಿಧಾನಿಕ ನಿಷೇಧ ಇರಬೇಕೇ, ಹೋಗಬೇಕೇ ಎಂಬ ಬಗ್ಗೆ ಸಂಪ್ರದಾಯವಾದಿ ಕೆಥೋಲಿಕ್ ದೇಶದ 35 ಲಕ್ಷ ಮತದಾರರು ತೀರ್ಮಾನಿಸಲಿದ್ದಾರೆ.
ಯುರೋಪ್‌ನ ಅತ್ಯಂತ ಧಾರ್ಮಿಕ ದೇಶಗಳ ಪೈಕಿ ಐರ್‌ಲ್ಯಾಂಡ್ ಒಂದು. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಥೋಲಿಕ್ ಚರ್ಚ್‌ನ ಪ್ರಭಾವ ಕುಂದುತ್ತಿದೆ.