ಭಾರತೀಯ ಸೇನೆಯ ಸಮಸ್ಯೆಗಳು

Update: 2018-05-25 18:35 GMT

ವ್ಯಂಗ್ಯವೆಂದರೆ, ರಾಷ್ಟ್ರೀಯತೆಯ ಬಗ್ಗೆ ಭಾರೀ ಭಾರೀ ಮಾತುಗಳು ಕೇಳಿ ಬರುತಿವೆ; ಆದರೆ ರಕ್ಷಣಾ ಸಚಿವಾಲಯದಲ್ಲಿರುವ ಸಮಸ್ಯೆ ಅವ್ಯವಸ್ಥೆಯನ್ನು ಸರಿಪಡಿಸಲು ಯಾವುದೇ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ. ದೇಶಕ್ಕೆ ಆಶ್ವಾಸನೆ ನೀಡಿದ 'ಮೇಕ್ ಇನ್ ಇಂಡಿಯಾ' ಅಭಿಯಾನ ಸೋತಿದೆ. ಡಿಆರ್‌ಡಿಬಿ ಮತ್ತು ಶಸ್ತ್ರಾಸ್ತ್ರ ಉತ್ಪಾದಿಸುವ ಕಾರ್ಖಾನೆಗಳು ರಕ್ಷಣಾ ವಿಭಾಗದ ಗುತ್ತಿಗೆಗೆ ಕಟ್ಟಿದ ಒಂದು ಕಲ್ಲಾಗಿದೆ. ಸರಕಾರಿ ಮಾಲಕತ್ವದ ಈ ಬೃಹತ್ತಾದ ಮಿಲಿಟರಿ-ಔದ್ಯಮಿಕ ಸಂಕೀರ್ಣದ ಹೊರತಾಗಿಯೂ ನಮ್ಮದು ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿರುವ ಒಂದು ಅತ್ಯಂತ ಆಮದುದಾರ ದೇಶವಾಗಿದೆ.

ಶಾಂತಿಯಲ್ಲಿ ನೀವು ಹೆಚ್ಚು ಹೆಚ್ಚು ಬೆವರಿದರೆ, ಯುದ್ಧದಲ್ಲಿ ನೀವು ಕಡಿಮೆ ನೆತ್ತರು ಸುರಿಸುತ್ತೀರಿ ಎಂಬ ಒಂದು ಮಾತಿದೆ. ಭಾರತೀಯ ಸೇನೆ ಈ ಪಾಠ ಕಲಿಯಲು ನಿರಾಕರಿಸುತ್ತಿದೆ. ಬೇಸರದ ಸಂಗತಿ ಎಂದರೆ ಬೆವರಿನ ಹೆಚ್ಚಿನ ಪಾಲು ಯಾವುದೇ ಶ್ರಮದಿಂದ ಸುರಿಯುವ ಬೆವರಲ್ಲ; ಬದಲಾಗಿ ನಮ್ಮ ಸೇನೆಯ ಆಧುನೀಕರಣದ ನಿಧಾನಗತಿ ಮತ್ತು ನಮ್ಮ ಸಶಸ್ತ್ರ ಪಡೆಗಳ ಸ್ವದೇಶೀಕರಣದಿಂದಾಗಿ ಸುರಿಯುವ ಬೆವರು. ಜಗತ್ತು ಯುದ್ಧದಲ್ಲಿ ತೃತೀಯ ಹಾಗೂ ಚತುರ್ಥ ಜನಾಂಗದ ಕಡೆಗೆ ಚಲಿಸುತ್ತಿದ್ದರೆ, ನಾವಿನ್ನೂ ಓಬಿರಾಯನ ಕಾಲದ ಜನಾಂಗದಲ್ಲೇ ಇದ್ದೇವೆ. ತೃತೀಯ ಜನಾಂಗದ ಯುದ್ಧ ತಂತ್ರಜ್ಞಾನ ಅಥವಾ ಯುದ್ಧಕಲೆಯು ವೇಗ, ಸದ್ದಿಲ್ಲದ ವೌನದಾಳಿ (ಸ್ಟೆಲ್ತ್) ಮತ್ತು ಏಕಾಏಕಿ ದಾಳಿ/ಹೊಂಚು ದಾಳಿ ಅಥವಾ ಸುಳಿವು ಕೊಡದೆ ನಡೆಸುವ ದಾಳಿಗಳನ್ನು ಬಳಸುತ್ತದೆ ಮತ್ತು ಇವುಗಳಲ್ಲಿ ಸೈಬರ್ ಯುದ್ಧ ವಿಮಾನಶಕ್ತಿ ಮತ್ತು ನಿರ್ದಿಷ್ಟ ಗುರಿಗಳ ಮೇಲೆ ನೆಟ್‌ವರ್ಕ್ ಹೊಂದಿರುವ ಸಶಸ್ತ್ರ ಪಡೆಗಳು ನಡೆಸುವ ದಾಳಿಗಳು ಒಳಗೊಂಡಿರುತ್ತವೆ. ನಾಲ್ಕನೇ ತಲೆಮಾರಿನ ಯುದ್ಧತಂತ್ರವು ಐಸಿಸ್(ಐಎಸ್‌ಐಎಸ್)ನಂತಹ ಹಿಂಸಾತ್ಮಕ, ದೇಶವಿಲ್ಲದ (ನಾನ್‌ಸ್ಟೇಟ್) ಶಕ್ತಿಗಳ ವಿರುದ್ಧ ಗುರಿ ಇಟ್ಟಿರುತ್ತದೆ. ಆದರೆ ನಾವು ಮಾತ್ರ ಇನ್ನೂ ಕೂಡ ಶಸ್ತ್ರಾಸ್ತ್ರಗಳ ಶಾಪಿಂಗ್ ಪಟ್ಟಿ ಹಿಡಿದುಕೊಂಡು ಒದ್ದಾಡುತ್ತ ಮಿಲಿಟರಿಯ ಆಧುನೀಕರಣವೆಂದರೆ ಶಸ್ತ್ರಾಸ್ತ್ರಗಳ ಶಾಪಿಂಗ್ ಎಂದು ತಪ್ಪು ತಿಳಿದು, ಒಂದನ್ನು ಇನ್ನೊಂದು ಎಂದು ಕನ್‌ಫ್ಯೂಸ್ ಮಾಡಿಕೊಂಡು ಕಾಲ ದೂಡುತ್ತಿದ್ದೇವೆ. ವಿಶ್ವದಲ್ಲೇ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ಅತ್ಯಂತ ಬೃಹತ್ ರಾಷ್ಟ್ರ ನಮ್ಮದು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಬಿ) ಮಾಂತ್ರಿಕ ಗುಂಡು ಹಾರಿಸುತ್ತದೆಂದು ನಾವು ಕಾಯುತ್ತ ಕೂತಿದ್ದೇವೆ. ಇದೇ ವೇಳೆ, ಚೀನಾದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತನ್ನ ದೇಶದ ಸಶಸ್ತ್ರ ಪಡೆಗಳಲ್ಲಿ ಭಾರೀ ಬದಲಾವಣೆಗಳನ್ನು ತಂದು ತನ್ನ ದೇಶವನ್ನು ವಿಶ್ವದಲ್ಲೇ ಅತ್ಯಧಿಕ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ದೇಶವಾಗಿ ಮಾರ್ಪಡಿಸುತ್ತಿದ್ದಾರೆ. ಇಂತಹ ವೇಳೆಯಲ್ಲಿ ಭಾರತ ಪರಿಣಾಮಕಾರಿಯಾದ ಒಂದು ರೈಫಲ್ ಉತ್ಪಾದಿಸಲು ವಿಫಲವಾಗಿದೆ. ಸ್ಥಳೀಯವಾಗಿ ಉತ್ಪಾದಿಸಲಾದ ಅರ್ಜುನ್ ಯುದ್ಧ ಟ್ಯಾಂಕ್‌ಗಳನ್ನು ಕಾರ್ಯಕ್ಷಮತೆಯ ಕಾರಣಗಳಿಗಾಗಿ ಸೂಕ್ಷ್ಮವಾದ ಚೀನಾ ಅಥವಾ ಪಾಕಿಸ್ತಾನದ ಗಡಿಗಳಲ್ಲಿ ಬಳಸುವಂತಿಲ್ಲ ಮತ್ತು ಲಘು ಯುದ್ಧ ವಿಮಾನಗಳನ್ನು ಅಭಿವೃದ್ಧಿ ಪಡಿಸುವತ್ತ ಮೂರು ದಶಕಗಳನ್ನು ಕಳೆದ ಬಳಿಕ ಭಾರತ ಈಗ 110 ಯುದ್ಧ ವಿಮಾನಗಳಿಗಾಗಿ ಒಂದು ಟೆಂಡರ್ ಕರೆದಿದೆ.

ಭಾರತೀಯ ಸೇನೆ ಯಾವುದೇ ರೀತಿಯ ಬೃಹತ್ ಬದಲಾವಣೆಯನ್ನು ಕಂಡದ್ದು 2001ರಲ್ಲಿ ಸಂಸತ್ತಿನ ಮೇಲೆ ದಾಳಿಗಳು ನಡೆದ ಬಳಿಕ. ದಾಳಿ ನಡೆಸಲು ಆಜ್ಞೆ ನೀಡಿ 48 ಗಂಟೆಗಳೊಳಗಾಗಿ ಶತ್ರುವಿನ ಮೇಲೆ ಮಿಲಿಟರಿ ಕಾರ್ಯಾಚರಣೆಗಳು, ದಾಳಿಗಳು ಸಾಧ್ಯವಾಗುವಂತೆ ಆ ಬದಲಾವಣೆಗಳು ಮಾಡಿದವು. ಬಿಜೆಪಿಯ 2014ರ ಚುನಾವಣಾ ಪ್ರಣಾಳಿಕೆಯಲ್ಲಿ 'ಸಶಸ್ತ್ರ ಪಡೆಗಳನ್ನು ಆಧುನೀಕರಣಗೊಳಿಸುವ ಮತ್ತು ಸಂಘಟನಾತ್ಮಕ ಸುಧಾರಣೆ ಮಾಡುವ' ಆಶ್ವಾಸನೆ ನೀಡಲಾಯಿತು. ಆದಾಗ್ಯೂ ನಾಲ್ಕು ವರ್ಷಗಳಲ್ಲಿ ನಾಲ್ವರು ರಕ್ಷಣಾ ಸಚಿವರನ್ನು ಕಂಡ ರಕ್ಷಣಾ ಸಚಿವಾಲಯ ತನ್ನ ಅಧಿಕಾರಶಾಹಿ ಕೆಸರಿನ ಹೊಂಡದಲ್ಲಿ ಬಿದ್ದು ಹೊರಳಾಡುತ್ತಿದೆ. ಭಾರತದ ರಕ್ಷಣಾ ಬಜೆಟ್‌ನ್ನು ಶೇ.7.8ರಷ್ಟು ಹೆಚ್ಚಿಸಲಾಗಿದೆಯಾ ದರೂ ಅದು 2018-19ರ ಪ್ರಸ್ತಾವಿತ ಒಟ್ಟು ದೇಶಿಯ ಉತ್ಪನ್ನದ ಸುಮಾರು ಶೇ.1.6ರಷ್ಟು ಮಾತ್ರ ಆಗಿದೆ. ಇದು 1962ರ ಭಾರತ ಚೀನಾ ಯುದ್ಧದ ಬಳಿಕ ಅತ್ಯಂತ ಕನಿಷ್ಠ ಅಂಕಿಸಂಖ್ಯೆಯಾಗಿದೆ. ತಜ್ಞರ ಪ್ರಕಾರ, ಪಾಕಿಸ್ತಾನ ಮತ್ತು ಚೀನಾದಿಂದ ಭಾರತಕ್ಕಿ ರುವ 'ಗುಪ್ತ ಸಹಕಾರ (ಕೊಲ್ಯೂಸಿವ್) ಬೆದರಿಕೆ'ಯನ್ನೆದುರಿಸಲು ಶೇ.2.5ಕ್ಕಿಂತ ಹೆಚ್ಚು ಇರುವ ಅಗತ್ಯವಿದೆ.
1999ರ ಕಾರ್ಗಿಲ್ ಯುದ್ಧದ ವೇಳೆ, ಅಂದಿನ ಸೇನಾ ಮುಖ್ಯಸ್ಥ ಜನರಲ್ ಪಿ.ಪಿ. ಮಲಿಕ್ ''ನಮ್ಮ ಬಳಿ ಏನಿದೆಯೋ ಅದನ್ನು ಬಳಸಿ ನಾವು ಹೋರಾಡುತ್ತೇವೆ, ಯುದ್ಧ ಮಾಡುತ್ತೇವೆ'' ಎಂದು ಹೇಳಿದ್ದರು.
ಹೆಚ್ಚು ಕಡಿಮೆ 20 ವರ್ಷಗಳ ಬಳಿಕ ಕೂಡ, ಭಾರತೀಯ ಸೇನೆಯ ಸ್ಥಿತಿ ಹಾಗೆಯೇ ಇದೆ, ರಕ್ಷಣಾ ಬಜೆಟ್ ಹಿಗ್ಗಿಲ್ಲ ಹಾಗೂ ರಕ್ಷಣಾ ಯೋಜನೆ ಕಳಪೆಯಾಗಿದೆ.
 ಸರಕಾರವು ಒಂದು ರಾಷ್ಟೀಯ ಭದ್ರತಾ ಯೋಜನೆ/ತಂತ್ರವನ್ನು ರೂಪಿಸಿಯೂ ಇಲ್ಲ, ರಕ್ಷಣಾ ಸಿಬ್ಬಂದಿಯ ಓರ್ವ ಮುಖ್ಯಸ್ಥ (ಸಿಡಿಎಸ್- ಚೀಫ್ ಆಫ್ ಡಿಫೆನ್ಸ್ ಸ್ಟಾಫ್)ನನ್ನು ನೇಮಕಮಾಡಿಯೂ ಇಲ್ಲ.
ಈ ಸಿಡಿಎಸ್, ಭದ್ರತಾ ಪಡೆಗಳ ನಡುವೆ ಸಮನ್ವಯ ಸಾಧಿಸುವ ಕೆಲಸ ಮಾಡಬಲ್ಲ ಓರ್ವ ಏಕ ಬಿಂದು ಸೇನಾ ಸಲಹೆಗಾರನಾಗಿದ್ದು, ಅವುಗಳ ನಡುವೆ ಬಜೆಟ್ ಸಂಪನ್ಮೂಲಗಳನ್ನು ಮಂಜೂರು ಮಾಡುವ/ ಹಂಚುವ ಕಾರ್ಯನಿರ್ವಹಿಸುವ ಮುಖ್ಯಸ್ಥರಾಗಿರುತ್ತಾರೆ.
ಈ ಮುಖ್ಯಸ್ಥರ ಹುದ್ದೆ ಇಲ್ಲದಿದ್ದಲ್ಲಿ, ಸಶಸ್ತ್ರಪಡೆಗಳ ಪ್ರತಿಯೊಂದು ವಿಭಾಗವೂ ತನ್ನ ಪಾಡಿಗೇ ತಾನು ಹೋರಾಡಲು ಸಿದ್ಧ್ದತೆ ನಡೆಸುತ್ತದೆ ಮತ್ತು ಬಜೆಟ್ ಸಂಪನ್ಮೂಲಗಳಲ್ಲಿ ಪ್ರತ್ಯೇಕ ಬೇಡಿಕೆಗಳನ್ನು ಸರಕಾರದ ಮುಂದಿಡುತ್ತದೆ. ನಮ್ಮ ರಕ್ಷಣಾ ಸಚಿವಾಲಯವು ಬ್ರಿಟಿಷರಿಂದ ಚಳವಳಿಯಾಗಿ ಬಂದ ಚಲನಶೀಲವಲ್ಲದ ಒಂದು ಚೌಕಟ್ಟು. ಆದರೆ ಬ್ರಿಟಿಷರು ತಮ್ಮ ಸಶಸ್ತ್ರಪಡೆಗಳ ಹಾಗೂ ರಕ್ಷಣಾ ಸಚಿವಾಲಯದ ನಡುವೆ ಸಮನ್ವಯ, ಏಕತೆ ಸಾಧಿಸಿದ್ದಾರೆ. ಭಾರತ ಮಾತ್ರ ಇನ್ನೂ ಕೂಡ ವ್ಯರ್ಥವಾಗುವ ಒಂದು ವಸಾಹತುಶಾಹಿ ವ್ಯವಸ್ಥೆಗೆ ಆತುಕೊಂಡೇ ಒದ್ದಾಡುತ್ತಿದೆ. ವಿಶ್ವದ ಇತರ ಪ್ರಮುಖ ಮಿಲಿಟರಿ ಪಡೆಗಳು ಕೂಡ ಮಾನವ ಶಕ್ತಿ (ಮ್ಯಾನ್ ಪವರ್) ಯನ್ನು ಕಡಿಮೆ ಮಾಡುತ್ತಿವೆ ಮತ್ತು ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುತ್ತಿವೆ. ಭಾರತೀಯ ಸೇನೆ ಮಾತ್ರ ಸೇನೆಗೆ ಶಸ್ತ್ರಾಸ್ತ್ರಗಳ, ಸಲಕರಣೆಗಳ ಬದಲಾಗಿ ಸೈನಿಕರನ್ನು ಸೇರಿಸಿಕೊಳ್ಳುತ್ತಿದೆ.
 ವ್ಯಂಗ್ಯವೆಂದರೆ, ರಾಷ್ಟ್ರೀಯತೆಯ ಬಗ್ಗೆ ಭಾರೀ ಭಾರೀ ಮಾತುಗಳು ಕೇಳಿ ಬರುತ್ತಿದೆ; ಆದರೆ ರಕ್ಷಣಾ ಸಚಿವಾಲಯದಲ್ಲಿರುವ ಸಮಸ್ಯೆ ಅವ್ಯವಸ್ಥೆಯನ್ನು ಸರಿಪಡಿಸಲು ಯಾವುದೇ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ. ದೇಶಕ್ಕೆ ಆಶ್ವಾಸನೆ ನೀಡಿದ 'ಮೇಕ್ ಇನ್ ಇಂಡಿಯಾ' ಅಭಿಯಾನ ಸೋತಿದೆ. ಡಿಆರ್‌ಡಿಬಿ ಮತ್ತು ಶಸ್ತ್ರಾಸ್ತ್ರ ಉತ್ಪಾದಿಸುವ ಕಾರ್ಖಾನೆಗಳು ರಕ್ಷಣಾ ವಿಭಾಗದ ಗುತ್ತಿಗೆಗೆ ಕಟ್ಟಿದ ಒಂದು ಕಲ್ಲಾಗಿದೆ. ಸರಕಾರಿ ಮಾಲಕತ್ವದ ಈ ಬೃಹತ್ತಾದ ಮಿಲಿಟರಿ-ಔದ್ಯಮಿಕ ಸಂಕೀರ್ಣದ ಹೊರತಾಗಿಯೂ ನಮ್ಮದು ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿರುವ ಒಂದು ಅತ್ಯಂತ ಆಮದುದಾರ ದೇಶವಾಗಿದೆ. ನಮ್ಮ ಆಮದು ಪ್ರಕ್ರಿಯೆಗಳು ಎಷ್ಟೊಂದು ಸಂಕೀರ್ಣವಾಗಿವೆ ಎಂದರೆ, ಒಂದೋ ನಾವು ತೀರ್ಮಾನಗಳನ್ನು ತೆಗೆದುಕೊಳ್ಳುವುದೇ ಇಲ್ಲ ಅಥವಾ ತೀರ್ಮಾನ ತೆಗೆದುಕೊಳ್ಳುವಾಗ ಎಷ್ಟು ವಿಳಂಬವಾಗುತ್ತದೆ ಎಂದರೆ ಅಷ್ಟರ ಹೊತ್ತಿಗೆ ಸಲಕರಣೆ ಹಳೆಯದಾಗಿರುತ್ತದೆ. ರಕ್ಷಣಾ ಸಾಮಗ್ರಿಗಳ ಕೊಳ್ಳುವಿಕೆಯಲ್ಲಿ ಮೋದಿ ಸರಕಾರದ ಪಕ್ಷಪಾತ ಹಾಗೆಯೇ ಉಳಿದಿದೆ. ಉತ್ತಮ ಪರಂಪರೆಗಳನ್ನು ಹೊಂದಿರುವ ನಮ್ಮ ಸಶಸ್ತ್ರ ಪಡೆ ಬಹಳ ಶ್ರೇಷ್ಠವಾದ, ಉನ್ನತವಾದ ಒಂದು ಸಂಸ್ಥೆಯಾಗಿದೆ. ಹೊಸ ಹಾಗೂ ನವನವೀನ ಚಿಂತನೆಯಿಂದ ಆಧುನಿಕ ಯುದ್ಧಕ್ಕೆ ಅವುಗಳನ್ನು ಸಿದ್ಧಗೊಳಿಸಬೇಕಾಗಿದೆ. ಆದರೆ ಧೈರ್ಯದ ಬಗ್ಗೆ ಎಂದೂ ಅನುಮಾನವಿಲ್ಲ. ಆದರೆ ಅದನ್ನು ಸಶಸ್ತ್ರ ಪಡೆಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗಿದೆ.

ಕೃಪೆ: indiatoday

Writer - ಅರುಣ್ ಪುರಿ

contributor

Editor - ಅರುಣ್ ಪುರಿ

contributor

Similar News

ಜಗದಗಲ
ಜಗ ದಗಲ