ಐಯರ್‌ಲ್ಯಾಂಡ್ ಗರ್ಭಪಾತ ನಿಷೇಧ ಕಾಯ್ದೆ ರದ್ದತಿಗೆ ಶೇ.66.4 ಜನಬೆಂಬಲ
ಲಂಡನ್,ಮೇ 27: ಐಯರ್‌ಲ್ಯಾಂಡ್‌ನಲ್ಲಿ ಗರ್ಭಪಾತ ನಿಷೇಧಿಸುವ ಕಾಯ್ದೆಯನ್ನು ರದ್ದುಪಡಿಸುವ ಕುರಿತು ನಡೆದ ಜನಮತ ಸಂಗ್ರಹಣೆಯ ಫಲಿತಾಂಶವನ್ನು ಶನಿವಾರ ತಡರಾತ್ರಿ ಪ್ರಕಟಿಸಲಾಗಿದ್ದು, ಶೇ.66.4 ಮಂದಿ ಮತದಾರರು ಗರ್ಭಪಾತ ನಿಷೇಧ ಕಾಯ್ದೆಯ ರದ್ದತಿಯನ್ನು ಬೆಂಬಲಿಸಿದ್ದರೆ, ಶೇ. 33.6 ಮಂದಿ ವಿರೋಧಿಸಿದ್ದಾರೆ.
ಜನಮತ ಸಂಗ್ರಹದ ಅಂತಿಮ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ರಾಜಧಾನಿ ಡಬ್ಲಿನ್‌ನ ಪ್ರಮುಖ ರಸ್ತೆಗಳಲ್ಲಿ ಜಮಾಯಿಸಿದ್ದ ನೂರಾರು ಮಂದಿ ಒಕ್ಕೊರಲಿನಿಂದ “ಸವಿತಾ, ಸವಿತಾ” ಎಂದು ಘೋಷಣೆ ಕೂಗಿದರು.
ಗರ್ಭಪಾತ ನಿಷೇಧ ಕಾಯ್ದೆಯ ಉದಾರೀಕರಣವನ್ನು ಬೆಂಬಲಿಸಿದ್ದ ಐಯರ್‌ಲ್ಯಾಂಡ್ ಪ್ರಧಾನಿ, ಭಾರತೀಯ ಮೂಲದವರಾದ ನಿಯೋ ವರಾಡ್‌ಕರ್ ಅವರು, ಜನಮತ ಸಂಗ್ರಹದ ಫಲಿತಾಂಶವನ್ನು ಸ್ವಾಗತಿಸಿದರು. ‘‘ಐಯರ್‌ಲ್ಯಾಂಡ್ ಪಾಲಿಗೆ ಇದೊಂದು ಐತಿಹಾಸಿಕ ದಿನವಾಗಿದ್ದು, ದೇಶದಲ್ಲಿ ಮೌನ ಕ್ರಾಂತಿಯೊಂದು ನಡೆದು ಹೋಗಿದೆ ಎಂದವರು ಹರ್ಷ ವ್ಯಕ್ತಪಡಿಸಿದರು.
ಈ ಮಧ್ಯೆ ಜನಾದೇಶದ ಹಿನ್ನೆಲೆಯಲ್ಲಿ ಗರ್ಭಪಾತ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಕರಡು ವಿಧೇಯಕವನ್ನು ಸಿದ್ಧಪಡಿಸುವಂತೆ ಐಯರ್‌ಲ್ಯಾಂಡ್ ಸಂಪುಟವು ಮಂಗಳವಾರ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸುವ ನಿರೀಕ್ಷೆಯಿದೆಯೆಂದು ಐರಿಶ್ ಟೈಮ್ಸ್ ಪತ್ರಿಕೆ ವರದಿ ಮಾಡಿ
ಸವಿತಾಗೆ ನ್ಯಾಯ ದೊರೆತಿದೆ
2012ರಲ್ಲಿ ಐಯರ್‌ಲ್ಯಾಂಡ್‌ನಲ್ಲಿ ಗರ್ಭಪಾತ ನಿರಾಕರಿಸಿದ್ದರಿಂದ ನಂಜುರೋಗಕ್ಕೆ ತುತ್ತಾಗಿ ಮೃತಪಟ್ಟ ದಂತವೈದ್ಯೆ ಸವಿತಾ ಹಾಲಪ್ಪನವರ್ ಅವರ ತಂದೆ ಜನಮತ ಸಂಗ್ರಹಣೆಯ ಫಲಿತಾಂಶವನ್ನು ಸ್ವಾಗತಿಸಿದ್ದಾರೆ. ಕೊನೆಗೂ ಸವಿತಾಗೆ ನ್ಯಾಯ ದೊರೆತಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.
ಗರ್ಭಪಾತ ನಿರಾಕರಣೆಯಿಂದಾಗಿ ಸವಿತಾ ಮೃತಪಟ್ಟ ಘಟನೆಯ ಬಳಿಕ ಐಯರ್‌ಲ್ಯಾಂಡ್‌ನಲ್ಲಿ ಗರ್ಭಪಾತ ನಿಷೇಧ ಕಾಯ್ದೆಯನ್ನು ರದ್ದುಪಡಿಸಲು ಸಂವಿಧಾಕ್ಕೆ ತಿದ್ದುಪಡಿತರಬೇಕೆಂದು ಆಗ್ರಹಿಸುವ ಚಳವಳಿ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು.
ಶುಕ್ರವಾರ ನಡೆದ ಜನಾಭಿಪ್ರಾಯ ಸಂಗ್ರಹದ ಫಲಿತಾಂಶವನ್ನು ಜನಮತ ಸಂಗ್ರಹದ ಫಲಿತಾಂಶದ ಬಗ್ಗೆ ಸವಿತಾ ಆವರ ತಂದೆ ಆನಂದಪ್ಪ ಯಾಲಗಿ ಪ್ರತಿಕ್ರಿಯಿಸುತ್ತಾ, ನನಗೆ ಸಂತಸವಾಗಿದೆ. ಸವಿತಾಗೆ ನಾವು ನ್ಯಾಯ ದೊರಕಿಸಿಕೊಟ್ಟಿದ್ದೇವೆ ಹಾಗೂ ಆಕೆಗೆ ಅಗಿರುವಂತಹದ್ದು, ಇನ್ನಾರಿಗೂ ಸಂಭವಿಸದೆ ಇರಲಿ ಎಂದು ಹೇಳಿದರು. ಈ ಐತಿಹಾಸಿಕ ಕ್ಷಣದಲ್ಲಿ ಐಯರ್‌ಲ್ಯಾಂಡ್‌ನ ಜನತೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳೇ ಉಳಿದಿಲ್ಲ’’ ಎಂದು ಯಾಲಪ್ಪ ಭಾವುಕರಾಗಿ ಹೇಳಿದರು.