×
Ad

125 ವರ್ಷ ಹಳೆಯ ಈ ಜೀನ್ಸ್ ಪ್ಯಾಂಟ್ ಬೆಲೆ ಕೇಳಿದರೆ ನಿಮ್ಮ ತಲೆ ತಿರುಗಬಹುದು!

Update: 2018-05-27 22:55 IST

 ನ್ಯೂಯಾರ್ಕ್, ಮೇ 27: ಸುಮಾರು 125 ವರ್ಷಗಳಷ್ಟು ಹಳೆಯದಾದ ಒಂದು ಜೋಡಿ ಜೀನ್ಸ್ ಪ್ಯಾಂಟ್ ಅಮೆರಿಕದಲ್ಲಿ ಬರೋಬ್ಬರಿ 1 ಲಕ್ಷ ಡಾಲರ್‌ಗೆ(67 ಲಕ್ಷ ರೂ.) ಮಾರಾಟವಾಗಿದೆಯೆಂದು ಅಮೆರಿಕದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

   ಲೆವಿ ಸ್ಟ್ರಾಟುಸ್ ಆ್ಯಂಡ್ ಕೊ. ಸಂಸ್ಥೆಯು ತಯಾರಿಸಿದ್ದ ಈ ಜೀನ್ಸ್ ಪ್ಯಾಂಟ್‌ಗಳು ಮೇ 15ರಂದು ಮೆಯ್ನೆ ನಗರದಲ್ಲಿ ನಡೆದ ಹರಾಜೊಂದರಲ್ಲಿ ಮಾರಾಟವಾಗಿದೆ. ಆಗ್ನೇಯ ಏಶ್ಯದ ಗ್ರಾಹಕರೊಬ್ಬರು ಅವುಗಳನ್ನು ಖರೀದಿಸಿದ್ದಾರೆಂದು ಅದು ಹೇಳಿದೆ.

ಪೂರ್ವ ಕರಾವಳಿಯ ನ್ಯೂಹ್ಯಾಂಪ್‌ಶೈರ್ ನಗರದ ಗಿರಣಿಯೊಂದರಲ್ಲಿ ಈ ಜೀನ್ಸ್ ಪ್ಯಾಂಟ್‌ಗಳ ಬಟ್ಟೆಯನ್ನು ತಯಾರಿಸಲಾಗಿದ್ದರೆ, ಪಶ್ಚಿಮ ಕರಾವಳಿ ತೀರದ ಸ್ಯಾನ್‌ಫ್ರಾನ್ಸಿಸ್ಕೊ ನಗರದಲ್ಲಿ ಈ ಪ್ಯಾಂಟ್‌ಗಳನ್ನು ಹೊಲಿಯಲಾಗಿತ್ತು.

ಮೊತ್ತ ಮೊದಲಿಗೆ ಈ ಪ್ಯಾಂಟ್‌ಗಳನ್ನು ಅರಿರೊನಾದ ಅಂಡಿಯೊಂದರ ಮಾಲ ಕ ಸೊಲೊಮನ್ ವಾರ್ನರ್ ಎಂಬವರು ಖರೀದಿಸಿದ್ದರು. ವಾರ್ನರ್ ಅವರು ಸಾವಿಗೀಡಾಗುವ ಮೊದಲು ತೀರಾ ಅಪರೂಪಕ್ಕೆ ಈ ಪ್ಯಾಂಟ್‌ಗಳನ್ನು ಧರಿಸಿದ್ದರು. ಹೀಗಾಗಿ ಅವು ಉತ್ತಮ ಸ್ಥಿತಿಯಲ್ಲಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News