ಮಾಜಿ ಐಎಸ್‌ಐ ವರಿಷ್ಠನಿಗೆ ಪಾಕ್ ಬಿಟ್ಟು ತೆರಳದಂತೆ ಆದೇಶ

Update: 2018-05-28 17:24 GMT

ಇಸ್ಲಾಮಾಬಾದ್, ಮೇ 28: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ವರಿಷ್ಠ ಲೆ.ಜ . ಅಸ್ಸಾದ್ ದುರಾನಿ ದೇಶಬಿಟ್ಟು ತೆರಳದಂತೆ ಪಾಕ್ ಸೇನೆ ಸೋಮವಾರ ಆದೇಶ ನೀಡಿದೆ. ಭಾರತದ ಗುಪ್ತಚರ ಸಂಸ್ಥೆ ‘ರಾ’ದ ವರಿಷ್ಠ ಎ.ಆರ್.ದುಲತ್ ಜೊತೆ ದುರಾನಿ ಬರೆದಿದ್ದ ‘ಸ್ಪೈ ಕ್ರಾನಿಕಲ್ಸ್’ ಪುಸ್ತಕವು ವಿವಾದಕ್ಕೆ ಗ್ರಾಸವಾದ ಬೆನ್ನಲ್ಲೇ ಪಾಕ್ ಸೇನೆ ಈ ಕ್ರಮ ಕೈಗೊಂಡಿದೆ. ಅಫ್ಘಾನಿಸ್ತಾನ ಹಾಗೂ ಕಾಶ್ಮೀರದಲ್ಲಿ ಪಾಕ್ ಸೇನೆಯ ಪಾತ್ರದ ಬಗ್ಗೆ ಈ ಕೃತಿಯಲ್ಲಿ ಹಲವು ವಿಷಯಗಳನ್ನು ಬಹಿರಂಗಪಡಿಸಲಾಗಿದೆಯೆನ್ನಲಾಗಿದೆ.

  1990ರಿಂದ 1992ರವರೆಗೆ ಐಎಸ್‌ಐ ವರಿಷ್ಠರಾಗಿದ್ದ ಅಸಾದ್ ದುರಾನಿಯವರನ್ನು ನಿರ್ಗಮನ ನಿಯಂತ್ರಣ ಪಟ್ಟಿ (ಇಸಿಎಲ್)ನಲ್ಲಿ ಸೇರ್ಪಡೆಗೊಳಿಸಲಾಗಿದೆಯೆಂದು ಸೇನಾ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News