ಅಂಚೆ ಕಾರ್ಡುಗಳಲ್ಲಿ ಶುಭ ಹಾರೈಸುವ ಅಣ್ಣಪ್ಪಚೌಗುಲೆ

Update: 2018-05-28 18:32 GMT

ಮಹಾಸತ್ತಾ, ಲೋಕ್‌ನೇತಾ ಮತ್ತು ಲೋಕ್‌ಮತ್ ದೈನಿಕಗಳಲ್ಲಿ ಸ್ಫೂರ್ತಿ ತುಂಬುವ ಸುದ್ದಿಗಳನ್ನು ಗುರುತಿಸಿದ ಬಳಿಕ ಚೌಗುಲೆ ಅವುಗಳನ್ನು ಒಂದು ನೋಟ್ ಬುಕ್‌ನಲ್ಲಿ ಗುರುತು ಮಾಡಿಕೊಳ್ಳುತ್ತಾರೆ. ಬಳಿಕ ತನ್ನ ಗೆಳೆಯರ ಹಾಗೂ ಪರಿಚಿತರ ಮೂಲಕ ಸಾಧಕರ ವಿಳಾಸಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಾರೆ. ತನ್ನ ಹಳೆಯ ಡೈರಿಯಲ್ಲಿ ಇಟ್ಟುಕೊಂಡಿರುವ ರಿಫಿಲ್‌ಗಳನ್ನು ಬಳಸಿ ಚೌಗುಲೆ ಮರಾಠಿಯಲ್ಲಿ ಅಂಚೆ ಕಾರ್ಡುಗಳನ್ನು ಬರೆಯುತ್ತಾರೆ.

‘‘ಜನರು ಬದುಕಿದ್ದಾಗ ಅವರನ್ನು ಪ್ರಶಂಸಿಸಿ ಅವರು ಸತ್ತ ನಂತರ ಅವರನ್ನು ಹಾಡಿ ಹೊಗಳಿ ಏನು ಪ್ರಯೋಜನ? ಆಗ ಅವರ ಚಿತ್ರಕ್ಕೆ ಹೂಹಾರ ಹಾಕಿ’’ ಎನ್ನುತ್ತಾರೆ ಅಣ್ಣಪ್ಪಚೌಗುಲೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಬನೂರು ಪಟ್ಟಣದ ಓರ್ವ ಕಾವಲುಗಾರ ಹಾಗೂ ಸಕ್ಕರೆ ಕಾರ್ಖಾನೆಯ ನಿವೃತ್ತ ಕಾರ್ಮಿಕ 66ರ ಹರೆಯದ ಚೌಗುಲೆ ಜನರ ಸಾಧನೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹದಾಯಕವಾದ ಅಂಚೆ ಕಾರ್ಡುಗಳನ್ನು ಕಳುಹಿಸಿ ಅವರ ಸಾಧನೆಗಳನ್ನು ಸಂಭ್ರಮಿಸುತ್ತಾರೆ. ಕಳೆದ ಏಳು ವರ್ಷಗಳಲ್ಲಿ ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳ ಉದ್ದಗಲಕ್ಕೂ ಇರುವ ಹಳ್ಳಿ ಹಾಗೂ ಪಟ್ಟಣಗಳ ಜನರಿಗೆ ಅವರ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಅಲ್ಲದೆ ಇತರ ಅನೇಕ ಸಾಧನೆಗಳನ್ನು ಗುರುತಿಸಿ ಚೌಗುಲೆ ಸುಮಾರು ಒಂಬೈನೂರು ಅಂಚೆ ಕಾರ್ಡುಗಳನ್ನು ಕಳುಹಿಸಿದ್ದಾರೆ.

‘‘ಸಂಗೀತ, ಕ್ರೀಡೆ, ಶಿಕ್ಷಣ, ಸಮಾಜ ಸೇವೆ, ಕಲೆ ಇತ್ಯಾದಿ ರಂಗಗಳಲ್ಲಿ ಪ್ರಶಸ್ತಿಗಳನ್ನು ಪಡೆದವರನ್ನು ನಾನು ಅಭಿನಂದಿಸಿ ಅವರಿಗೆ ಅಂಚೆ ಕಾರ್ಡ್ ಬರೆಯುತ್ತೇನೆ. ಸ್ಥಳೀಯ ಮರಾಠಿ ವರ್ತಮಾನ ಪತ್ರಿಕೆಗಳಲ್ಲಿ ಭರವಸೆ ಹಾಗೂ ಶೌರ್ಯ, ಸಾಹಸದ ಸುದ್ದಿಗಳನ್ನು ಓದುವುದರೊಂದಿಗೆ ನನ್ನ ದಿನ ಆರಂಭವಾಗುತ್ತದೆ. ಇದಕ್ಕಾಗಿ ನಾನು ಮೂರು ಮರಾಠಿ ದಿನಪತ್ರಿಕೆಗಳನ್ನು ಕೊಂಡುಕೊಳ್ಳುತ್ತೇನೆ.’’ ಮಹಾಸತ್ತಾ, ಲೋಕ್‌ನೇತಾ ಮತ್ತು ಲೋಕ್‌ಮತ್ ದೈನಿಕಗಳಲ್ಲಿ ಸ್ಫೂರ್ತಿ ತುಂಬುವ ಸುದ್ದಿಗಳನ್ನು ಗುರುತಿಸಿದ ಬಳಿಕ ಚೌಗುಲೆ ಅವುಗಳನ್ನು ಒಂದು ನೋಟ್ ಬುಕ್‌ನಲ್ಲಿ ಗುರುತು ಮಾಡಿಕೊಳ್ಳುತ್ತಾರೆ. ಬಳಿಕ ತನ್ನ ಗೆಳೆಯರ ಹಾಗೂ ಪರಿಚಿತರ ಮೂಲಕ ಸಾಧಕರ ವಿಳಾಸಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಾರೆ. ತನ್ನ ಹಳೆಯ ಡೈರಿಯಲ್ಲಿ ಇಟ್ಟುಕೊಂಡಿರುವ ರಿಫಿಲ್‌ಗಳನ್ನು ಬಳಸಿ ಚೌಗುಲೆ ಮರಾಠಿಯಲ್ಲಿ ಅಂಚೆ ಕಾರ್ಡುಗಳನ್ನು ಬರೆಯುತ್ತಾರೆ. ಜನ್ಮದಿನ ಹಾಗೂ ವಾರ್ಷಿಕೋತ್ಸವದ ಶುಭಾಶಯಗಳಿಗೆ ಅವರ ಬಳಿ ಒಂದು ನಿರ್ದಿಷ್ಟ ಪಠ್ಯ ಇದೆ. ಆದರೆ ಇತರ ಸಾಧಕರಿಗೆ ಅವರು ವೈಯಕ್ತಿಕವಾದ ಸಂದೇಶಗಳನ್ನು ಬರೆದು ಅವರ ಕೆಲಸವನ್ನು ಮೆಚ್ಚಿ ಅವರನ್ನು ಅಭಿನಂದಿಸುತ್ತಾರೆ. ಸಾಧಕ ಆರು ಕಿಲೋಮೀಟರ್ ವ್ಯಾಪ್ತಿಯೊಳಗೆ ಇದ್ದಲ್ಲಿ ಚೌಗುಲೆ ಸೈಕಲ್‌ನಲ್ಲಿ ಹೋಗಿ ಅವರಿಗೆ ಸ್ವತಃ ತಾನೇ ಅಂಚೆ ಕಾರ್ಡು ನೀಡುತ್ತಾರೆ. ‘‘ಭಾರ ಎತ್ತುವಿಕೆಯಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ ತೃಪ್ತಿ ಮಾಣಿ ಎಂಬ ಹುಡುಗಿಯೊಬ್ಬಳ ಬಗ್ಗೆ ಓದಿದ ತಕ್ಷಣ ನಾನು ಇಚಲ್‌ಕರಂಜಿಲ್ ನಲ್ಲಿರುವ ಅವಳ ಮನೆಗೆ ಸೈಕಲ್‌ನಲ್ಲಿ ಹೋಗಿ ಅವಳನ್ನು ಅಭಿನಂದಿಸಿ ಒಂದು ಅಂಚೆ ಕಾರ್ಡ್ ನೀಡಿದೆ.’’
ಸಾಜನಿ, ಕುಂಬೋಜ್, ರೂಹಿ, ಚಂದೂರು, ಸತಾರ, ಸಾಂಗ್ಲಿ ಹಾಗೂ ಬೆಳಗಾವಿಯ ಕೆಲವು ಹಳ್ಳಿಗಳಿಗೆ ಚೌಗುಲೆಯವರ ಅಂಚೆ ಕಾರ್ಡುಗಳು ಹೋಗಿವೆ. ಜನ್ಮದಿನ ಹಾಗೂ ವಾರ್ಷಿಕೋತ್ಸವಗಳ ಚೌಗುಲೆಯವರ ದಾಖಲೆಗಳು ಈಗ ನಲವತ್ತು ವಾರ್ಷಿಕ ಪಾಕೆಟ್ ಡೈರಿಗಳಷ್ಟಾಗಿವೆ: ‘‘ಬಹಳ ಮಂದಿ ನನ್ನನ್ನು ಅವರ ವಿವಾಹಕ್ಕೆ ಆಹ್ವಾನಿಸುತ್ತಾರೆ. ಆಗ ನಾನು ಅವರ ವಿವಾಹ ವಾರ್ಷಿಕೋತ್ಸವದ ದಿನಗಳನ್ನು ಗುರುತು ಮಾಡಿಕೊಳ್ಳಲಾರಂಭಿಸಿದೆ.’’

ಮಹತ್ವಾಕಾಂಕ್ಷೆ ಮತ್ತು ಭಾವತೀವ್ರತೆ ಬಡತನದಿಂದಾಗಿ ಚೌಗುಲೆ ಹತ್ತನೇ ತರಗತಿಗಿಂತ ಮುಂದಕ್ಕೆ ಹೋಗಲಾಗಲಿಲ್ಲ. ಅವರು ಎರಡು ಅಥವಾ ಮೂರು ವರ್ಷದ ಮಗುವಾಗಿದ್ದಾಗ ಅವರ ತಂದೆ ನಿಧನ ಹೊಂದಿದರು. ಅವರ ತಾಯಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಅವರು 1976ರಲ್ಲಿ ಸಕ್ಕರೆ ಕಾರ್ಖಾನೆಯೊಂದರಲ್ಲಿ ನೌಕರಿ ಮಾಡಲು ಆರಂಭಿಸಿ 2010ರಲ್ಲಿ ನಿವೃತ್ತರಾದರು. ಕಳೆದ ಎರಡು ವರ್ಷಗಳಿಂದ ಗಿರಣಿಯೊಂದರಲ್ಲಿ ಕಾವಲುಗಾರರಾಗಿರುವ ಚೌಗುಲೆ ತಿಂಗಳೊಂದರ ರೂಪಾಯಿ ಐದು ಸಾವಿರ ವೇತನ ಪಡೆಯುತ್ತಿದ್ದಾರೆ.


ವೈಯಕ್ತಿಕವಾದ ಅಂಚೆ ಕಾರ್ಡುಗಳನ್ನು ಕಳುಹಿಸುವ ವಿಚಾರ ಅವರಿಗೆ ಹೊಳೆದದ್ದು ಮಾಜಿ ಸಕ್ಕರೆ ಕಾರ್ಖಾನೆ ಮಾಲಕರೊಬ್ಬರು ಅಂತಹ ಕಾರ್ಡುಗಳನ್ನು ಕಳೆಯುತ್ತಿದ್ದುದನ್ನು ಕಂಡಾಗ.
2011ರಲ್ಲಿ ಚೌಗುಲೆಯವರಿಗೆ ತಾನೇನಾದರೂ ಸಾಧಿಸಿ ತನ್ನ ಹೆಸರು ಜನರ ನೆನಪಿನಲ್ಲುಳಿಯುವಂತೆ ಮಾಡಬೇಕು ಎಂದು ಅನ್ನಿಸಿತು. ಆದರೆ ಅವರು ಅಂಚೆ ಕಾರ್ಡುಗಳನ್ನು ಕಳುಹಿಸಲು ಯಾಕೆ ನಿರ್ಧರಿಸಿದರು?
‘‘ಅಂಚೆ ಕಾರ್ಡಿಗೆ ಅದರದ್ದೇ ಆದ ಮಹತ್ವವಿದೆ ಅಲ್ಲದೆ ಹಸ್ತಾಕ್ಷರದಲ್ಲಿ ಬರೆದ ಶಬ್ದಗಳಿಗೆ ಒಂದು ರೀತಿಯ ಪ್ರೀತಿ ಇದೆ’’. ಅವರ ದತ್ತಾಂಶ ಕಳೆದ ಏಳು ವರ್ಷಗಳಲ್ಲಿ ತುಂಬಾ ಬೆಳೆದಿರುವುದರಿಂದ ಈಗ ಕೆಲವು ದಿನಗಳಲ್ಲಿ ಅವರು ದಿನವೊಂದರ ಮೂರು ಅಂಚೆ ಕಾರ್ಡು ಬರೆಯುತ್ತಾರೆ ಮತ್ತು ತನ್ನ ಡೈರಿಗಳ ಸಂಗ್ರಹವನ್ನು ನೋಡುತ್ತಾ ಸುಮಾರು ಮೂವತ್ತು ನಿಮಿಷ ಕಳೆಯುತ್ತಾರೆ.
ಚೌಗುಲೆ ತುಂಬಾ ವ್ಯವಸ್ಥಿತವಾಗಿ ಅಂಚೆ ಕಾರ್ಡ್ ಬರೆಯುವ ಕೆಲಸ ಮಾಡುತ್ತಾರೆ. ಅವರ ಬಳಿ ಹಲವು ಉಪ ಶೀರ್ಷಿಕೆಗಳನ್ನು ಹೊಂದಿರುವ ‘ಪತ್ರ ವ್ಯವಹಾರ’ ಎಂಬ ಹೆಸರಿನ ಒಂದು ಕಡತ ಇದೆ ಆ ಕಡತದಲ್ಲಿ ತಾನು ಇದುವರೆಗೆ ಬರೆದಿರುವ ಪತ್ರಗಳ ಹಾಗೂ ಅಂಚೆ ಕಾರ್ಡುಗಳ ಪಟ್ಟಿಯಿದೆ. ನೂರು ಪುಟಗಳ ಒಂದು ನೋಟ್ ಬುಕ್ಕಿನಲ್ಲಿ ಅವರು ತಾನು ಕಳುಹಿಸಿದ ಪ್ರತಿಯೊಂದು ಅಂಚೆ ಕಾರ್ಡ್ ವಿವರವನ್ನೂ ಬರೆದಿಟ್ಟಿದ್ದಾರೆ.
ಅವರು ತಾನೇ ಹೋಗಿ ಒಬ್ಬರಿಗೆ ಅಂಚೆ ಕಾರ್ಡ್ ನೀಡುವಾಗ ಅವರ ಜೊತೆ ನಿಂತು ಒಂದು ಫೋಟೊ ತೆಗೆಸಿಕೊಳ್ಳುತ್ತಾರೆ. ಈಗ ಜನರಿಗೆ ನನ್ನ ಅಂಚೆ ಕಾರ್ಡುಗಳನ್ನು ಪಡೆಯುವುದು ಒಂದು ಅಭ್ಯಾಸವಾಗಿ ಹೋಗಿದೆ’’ ಎನ್ನುತ್ತಾರೆ ಚೌಗುಲೆ.


 ಆರಂಭದಿಂದಲೂ ಚೌಗುಲೆ ಸ್ಥಳೀಯ ಹಾಗೂ ರಾಷ್ಟ್ರೀಯ ಎರಡೂ ಮಟ್ಟದ ಚುನಾಯಿತ ಜನಪ್ರತಿನಿಧಿಗಳಿಗೆ ಹಲವು ಸನ್ನಿವೇಶಗಳಲ್ಲಿ ಅವರನ್ನು ಅಭಿನಂದಿಸಿ ಅಂಚೆ ಕಾರ್ಡುಗಳನ್ನು ಪತ್ರಗಳನ್ನು ಬರೆಯುತ್ತಾ ಬಂದಿದ್ದಾರೆ. ಪ್ರಣಬ್ ಮುಖರ್ಜಿಯವರು ರಾಷ್ಟ್ರಪತಿ ಹುದ್ದೆ ಅಲಂಕರಿಸಿದಾಗ, ಸೋನಿಯಾ ಗಾಂಧಿ ಅವರ ಜನ್ಮದಿನದಂದು, ಪ್ರಧಾನಿ ಮೋದಿಯವರು 2014ರ ಸಾರ್ವತ್ರಿಕ ಚುನಾವಣೆಯನ್ನು ಗೆದ್ದಾಗ ಅಭಿನಂದಿಸಿ ಬರೆದಿದ್ದಾರೆ. ಮನುಕಲಕುವ ಸಾಧನೆಗಳೆಂದರೆ ಚೌಗುಲೆಯವರಿಗೆ ವಿಶೇಷ ಅಭಿಮಾನ. ಕಳೆದ ವರ್ಷ ಕೂಲಿ ಕಾರ್ಮಿಕನೊಬ್ಬನ ಅವಳಿ ಹೆಣ್ಣು ಮಕ್ಕಳಿಬ್ಬರು ಹತ್ತನೇ ತರಗತಿಯಲ್ಲಿ ಶೇಕಡಾ 98 ಅಂಕ ಗಳಿಸಿದಾಗ ಚೌಗುಲೆ ಆ ಹುಡುಗಿಯರನ್ನು ಭೇಟಿಯಾಗಿ ಅಭಿನಂದಿಸುವುದಕ್ಕಾಗಿ ತನ್ನ ಸೈಕಲ್ ಏರಿ ಮೂರು ಬಾರಿ ಹೋಗಬೇಕಾಯಿತು.
ಅಂಚೆ ಕಾರ್ಡ್‌ಗಳನ್ನು ಬರೆಯುವ ಸಂಭ್ರಮ ಸುಲಭದ ಹಾದಿಯಾಗಿರಲಿಲ್ಲ. ಅವರೇಕೆ ಬರೆಯುವುದೆಂದು ಕೇಳುವವರಿಗೆ ಅವರ ಉತ್ತರ: ‘‘ಅದು ನನ್ನ ಹವ್ಯಾಸ ಮತ್ತು ಫ್ಯಾಶನ್’’. ಅದರಿಂದೇನೂ ಲಾಭವಿಲ್ಲದ್ದರಿಂದ ಅವರ ಕುಟುಂಬದ ಸದಸ್ಯರು ಕೂಡಾ ಅವರ ಹವ್ಯಾಸದ ಬಗ್ಗೆ ಹೆಚ್ಚು ಸಹಕಾರಿಗಳಲ್ಲ.
‘‘ಅಂಚೆಕಾರ್ಡ್‌ಗಳನ್ನು ಕಳುಹಿಸುತ್ತಲೇ ಇರಬೇಕೆಂಬುದು ನನ್ನ ಕನಸು. ನಾನು 1000 ಕಾರ್ಡ್‌ಗಳನ್ನು ಕಳುಹಿಸಿದ ಬಳಿಕ ನನ್ನನ್ನು ಸನ್ಮಾನಿಸುವುದಾಗಿ ಕೆಲವರು ಹೇಳಿದ್ದಾರೆ. ಆದರೆ ನಾನಿದನ್ನು ಸಾಯುವ ದಿನದ ವರೆಗೂ ಮುಂದುವರಿಸುತ್ತೇನೆ’’ ಎನ್ನುತ್ತಾರೆ ಚೌಗುಲೆ.
ಕೃಪೆ: scroll.in

Writer - ಸಂಕೇತ್ ಜೈನ್

contributor

Editor - ಸಂಕೇತ್ ಜೈನ್

contributor

Similar News

ಜಗದಗಲ
ಜಗ ದಗಲ