ಕೋಳಿಗಳಿಂದ ನಿಪಾಹ್ ವೈರಸ್ ಹರಡುತ್ತದೆಯೇ?

Update: 2018-05-29 07:21 GMT

ಕಲ್ಲಿಕೋಟೆ, ಮೇ 29: ನಿಪಾಹ್ ವೈರಸ್ ಕೋಳಿಗಳ ಮೂಲಕ  ಹರಡುತ್ತಿದೆ ಎನ್ನುವ ಸಂದೇಶಗಳು ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್ ಹಾಗು ಫೇಸ್ ಬುಕ್ ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಕಲ್ಲಿಕೋಟೆ ಆರೋಗ್ಯಾಧಿಕಾರಿಯ ಹೆಸರಿನಲ್ಲಿ ಈ ಸಂದೇಶಗಳನ್ನು ಹರಡಲಾಗುತ್ತಿತ್ತು. ಬಾವಲಿಗಳ ಮೂಲಕ ನಿಪಾಹ್ ವೈರಸ್ ಹರಡುವುದಿಲ್ಲ ಎಂದು ಲ್ಯಾಬ್ ವರದಿಗಳು ತಿಳಿಸಿದ ನಂತರ ನಿಪಾಹ್ ವೈರಸ್ ಗೆ ಕೋಳಿಗಳೇ ಕಾರಣ ಎನ್ನುವ ವದಂತಿ ಹರಡಿತ್ತು.  

ಆದರೆ ಇಂತಹ ವದಂತಿಗಳು ಕಿಡಿಗೇಡಿಗಳ ಕೃತ್ಯವಾಗಿದ್ದು, ಜನರು ಇಂತಹ ಸಂದೇಶಗಳನ್ನು ನಂಬಬಾರದು ಎಂದು ಕಲ್ಲಿಕೋಟೆ ಜಿಲ್ಲಾ ವೈದ್ಯಾಧಿಕಾರಿ ಡಾ.ವಿ. ಜಯಶ್ರೀ ಹೇಳಿದ್ದಾರೆ.

ಇವೆಲ್ಲ ಅಪಪ್ರಚಾರಗಳಾಗಿವೆ. ಇದನ್ನು  ಸಾರ್ವಜನಿಕರು ನಂಬಬಾರದು. ಕಿಡಿಗೇಡಿಗಳು ನಕಲಿ ಲೆಟರ್ ಹೆಡ್ ಬಳಸಿ ಕೋಳಿಗಳಿಂದ ನಿಪಾಹ್ ವೈರಸ್ ಹರಡುತ್ತಿದೆ ಎಂದು ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News