ಪಾಕ್: ಉಸ್ತುವಾರಿ ಪ್ರಧಾನಿಯಾಗಿ ಮಾಜಿ ನ್ಯಾಯಾಧೀಶ ನೇಮಕ

Update: 2018-06-01 17:27 GMT

ಇಸ್ಲಾಮಾಬಾದ್, ಜೂ. 1: ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಾಧೀಶ ನಾಸಿರುಲ್ ಮುಲ್ಕ್ ಶುಕ್ರವಾರ ಎರಡು ತಿಂಗಳ ಅವಧಿಗೆ ಉಸ್ತುವಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.

ಸಂಸತ್ತಿನ ಕೆಳಮನೆಯನ್ನು ಅಧ್ಯಕ್ಷರು ವಿಸರ್ಜಿಸಿದ ಗಂಟೆಗಳ ಬಳಿಕ, ನಾಸಿರುಲ್ ಅವರು ಅಧ್ಯಕ್ಷರಿಂದ ಪ್ರಮಾಣವಚನ ಸ್ವೀಕರಿಸಿದರು.

60 ದಿನಗಳ ಅವಧಿಯಲ್ಲಿ ಚುನಾವಣೆ ನಡೆಯಬೇಕೆಂದು ಸಂವಿಧಾನ ಹೇಳುತ್ತದೆ. ಜುಲೈ 25ರಂದು ಮತದಾನ ನಡೆಯಲಿದೆ.

ನಿರ್ಗಮನ ಪ್ರಧಾನಿ ಶಾಹಿದ್ ಖಾಖನ್ ಅಬ್ಬಾಸಿ ಗುರುವಾರ ಮಧ್ಯರಾತ್ರಿ ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News