×
Ad

10,000 ಕೋಟಿ ರೂ. ರಕ್ಷಣಾ ಒಪ್ಪಂದಕ್ಕೆ ಪಾಕ್ ಸಹಿ

Update: 2018-06-01 23:23 IST

ಇಸ್ಲಾಮಾಬಾದ್, ಜೂ. 1: ಸುಮಾರು 1.5 ಬಿಲಿಯ ಡಾಲರ್ (ಸುಮಾರು 10,000 ಕೋಟಿ ರೂ.) ವೆಚ್ಚದಲ್ಲಿ 30 ದಾಳಿ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಂದವೊಂದಕ್ಕೆ ಟರ್ಕಿಯೊಂದಿಗೆ ಪಾಕಿಸ್ತಾನ ಸಹಿ ಹಾಕಿದೆ.

ಪಾಕಿಸ್ತಾನಕ್ಕೆ ನೀಡುತ್ತಿರುವ ಸೇನಾ ನೆರವಿನಲ್ಲಿ ಅಮೆರಿಕ ಭಾರೀ ಕಡಿತ ಮಾಡಿದ ಬಳಿಕ ಪಾಕಿಸ್ತಾನ ಈ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದ ಬಗ್ಗೆ 3 ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಮಾತುಕತೆಗಳು ನಡೆಯುತ್ತಿದ್ದವು.

ಈ ಒಪ್ಪಂದವನ್ನು ಅಂತಿಮಗೊಳಿಸಿರುವ ಸುದ್ದಿಯನ್ನು ಟರ್ಕಿಯ ಆಡಳಿತಾರೂಢ ಜಸ್ಟಿಸ್ ಆ್ಯಂಡ್ ಡೆವೆಲಪ್‌ಮೆಂಟ್ ಪಾರ್ಟಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲ್ಲಿ ಸೇರಿಸಿದೆ. ಟರ್ಕಿಯ ಸಂಸದೀಯ ಚುನಾವಣೆ ಜೂನ್‌ನಲ್ಲಿ ನಡೆಯಲಿದೆ.

 ಪಾಕಿಸ್ತಾನಕ್ಕೆ 30 ಯುದ್ಧ ಹೆಲಿಕಾಪ್ಟರ್‌ಗಳನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಈಗಷ್ಟೇ ಸಹಿ ಹಾಕಲಾಗಿದೆ ಎಂದು ಪ್ರಣಾಳಿಕೆ ಹೇಳಿದೆ. ಹೆಚ್ಚಿನ ವಿವರಗಳನ್ನು ಅದು ಒದಗಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News