ರೊನಾಲ್ಡೊ, ಮೆಸ್ಸಿ ಬಳಿಕ ಸುನಿಲ್ ಚೆಟ್ರಿ !

Update: 2018-06-02 05:51 GMT

ಮುಂಬೈ,ಜೂ.2 : ನಾಲ್ಕು ದೇಶಗಳ ಭಾಗವಹಿಸುವಿಕೆಯೊಂದಿಗೆ ಇಲ್ಲಿ ಶುಕ್ರವಾರ ಆರಂಭವಾದ ಇಂಟರ್ ಕಾಂಟಿನೆಂಟಲ್ ಕಪ್ ಫುಟ್ಬಾಲ್ ಪಂದ್ಯಾಟದ ಮೊದಲ ಪಂದ್ಯದಲ್ಲಿ ಭಾರತೀಯ ತಂಡದ ಕಪ್ತಾನ ಸುನಿಲ್ ಚೆಟ್ರಿ ತಮ್ಮ ಮೊದಲ ಅಂತರ್ ರಾಷ್ಟ್ರೀಯ ಹ್ಯಾಟ್ರಿಕ್ ಗೋಲ್ ಬಾರಿಸಿ ಈ ಮೂಲಕ ಅಂತರ್ ರಾಷ್ಟ್ರೀಯ ಫುಟ್ಬಾಲ್ ಕ್ಷೇತ್ರದಲ್ಲಿ  ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲಿಯೊನೆಲ್ ಮೆಸ್ಸಿ ಅವರ ನಂತರ ಮೂರನೇ ಅತ್ಯುತ್ತಮ ಗೋಲ್ ಸ್ಕೋರರ್ ಆಗಿದ್ದಾರೆ. ಚೆಟ್ರಿ ಅವರ ಹ್ಯಾಟ್ರಿಕ್ ಗೋಲ್ ಸಹಾಯದೊಂದಿಗೆ ಅನನುಭವಿ ಚೀನಾದ ತೈಪೆ ತಂಡವನ್ನು 5-0 ಅಂತರದಿಂದ ಭಾರತ ಸೋಲಿಸಿದೆ. 

ತಮ್ಮ ನೂರನೇ ಪಂದ್ಯವಾಡಲು ಇನ್ನೊಂದೇ ಪಂದ್ಯ ಬಾಕಿಯಿರುವ ಸ್ಟ್ರೈಕರ್ ಚೆಟ್ರಿ ತಮ್ಮ ಅಂತರ್ ರಾಷ್ಟ್ರೀಯ ಪಂದ್ಯಾಟಗಳ ಗೋಲುಗಳನ್ನು ಈ ಪಂದ್ಯದೊಂದಿಗೆ 59ಕ್ಕೆ ಏರಿಸಿಕೊಂಡಿದ್ದಾರೆ.

ಈ ಪಂದ್ಯಾಟವನ್ನು ಮುಂಬರುವ 2019 ಎಎಫ್‍ಸಿ ಏಷ್ಯನ್ ಕಪ್ ಪಂದ್ಯಾಟಕ್ಕೆ ಒಂದು ಪೂರ್ವತಯಾರಿ ಎಂದೇ ಪರಿಗಣಿಸಿರುವ ಅತಿಥೇಯ ತಂಡ ಪಂದ್ಯದ ಆರಂಭದಿಂದಲೂ ಆಟದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಉದಾಂತ ಸಿಂಗ್ ಹಾಗೂ ಪ್ರಣಯ್ ಹಲ್ದರ್ ಭಾರತಕ್ಕೆ ಮೂರನೇ ಮತ್ತು ಐದನೇ ಗೋಲುಗಳನ್ನು ಬಾರಿಸಿದರು.

ಭಾರತ ತಂಡದ ಇತರ ಆಟಗಾರರಾದ ಜೇಜೆ ಲಾಲ್ಪೇಖ್ಲುವ, ಅನಿರುಧ್ ಥಾಪಾ, ಸುಭಾಶ್ ಬೋಸ್ ಕೂಡ ಉತ್ತಮ ಪ್ರದರ್ಶನ ನೀಡಿದರು.

ಭಾರತದ ಪಾಲಿಗೆ ಇದೊಂದು ಅರ್ಹ ವಿಜಯವಾಗಿದ್ದರೂ  ಈ ಪಂದ್ಯಾಟ ಮೊದಲ ಬಾರಿಗೆ  ತಮ್ಮ ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವ ಯುವ ತಂಡವೊಂದರೆದುರು ದೊರಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News