ಸಿರಿಯ: ಅಮೆರಿಕ ದಾಳಿಯಲ್ಲಿ ಕುಟುಂಬದ 12 ಸದಸ್ಯರು ಮೃತ್ಯು

Update: 2018-06-02 17:30 GMT

ಬೈರೂತ್, ಜೂ. 2: ಉತ್ತರ ಸಿರಿಯದಲ್ಲಿರುವ ಬಂಡುಕೋರ ನೆಲೆಯೊಂದರ ಮೇಲೆ ಅಮೆರಿಕ ನೇತೃತ್ವದ ಮೈತ್ರಿಕೂಟ ನಡೆಸಿದ ದಾಳಿಯಲ್ಲಿ ಕನಿಷ್ಠ 12 ನಾಗರಿಕರು ಮೃತಪಟ್ಟಿದ್ದಾರೆ ಹಾಗೂ ಅವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

‘‘ಅಂತಾರಾಷ್ಟ್ರೀಯ ಮೈತ್ರಿಕೂಟ ಶುಕ್ರವಾರ ರಾತ್ರಿ ಹಿದಾಜ್ ಗ್ರಾಮದ ಮೇಲೆ ನಡೆಸಿದ ವಾಯು ಮತ್ತು ಫಿರಂಗಿ ದಾಳಿಗಳಲ್ಲಿ ಕನಿಷ್ಠ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ’’ ಎಂದು ಬ್ರಿಟನ್‌ನಲ್ಲಿ ನೆಲೆ ಹೊಂದಿರುವ ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

ಇಬ್ಬರು ಮಹಿಳೆಯರು ಮತ್ತು ಅವರ ಮಕ್ಕಳು ಸೇರಿದಂತೆ ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News