ರೋಹನ್-ಎಡ್ವರ್ಡ್ ಜೋಡಿ ಕ್ವಾರ್ಟರ್ ಪೈನಲ್‌ಗೆ

Update: 2018-06-02 18:36 GMT

ಪ್ಯಾರಿಸ್, ಜೂ.2: ರೋಹನ್ ಬೋಪಣ್ಣ ಹಾಗೂ ಎಡ್ವರ್ಡ್ ರೋಜರ್-ವಸ್ಸೆೆಲಿನ್ ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ. ಇಲ್ಲಿ ಶನಿವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 13ನೇ ಶ್ರೇಯಾಂಕದ ರೋಹನ್-ಎಡ್ವರ್ಡ್ ಅವರು ಮಾರ್ಸೆಲೊ ಮೆಲೊ ಹಾಗೂ ಲುಕಾಸ್ ಕುಬೊಟ್‌ರನ್ನು 6-4, 7-6 ನೇರ ಸೆಟ್‌ಗಳಿಂದ ಸೋಲಿಸಿದರು. ಒಂದೂವರೆ ಗಂಟೆ ಕಾಲ ನಡೆದ ಹಣಾಹಣಿಯಲ್ಲಿ ಎದುರಾಳಿ ತಂಡವನ್ನು ಸುಲಭವಾಗಿ ಮಣಿಸಿದ ರೋಹನ್-ಎಡ್ವರ್ಡ್ ಭಾರೀ ಆತ್ಮವಿಶ್ವಾಸ ಪಡೆದಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಅಲೆಕ್ಸಾಂಡರ್ ಪಿಯಾ ಹಾಗೂ ನಿಕೊಲಾ ಮೆಕ್‌ಟಿಕ್‌ರನ್ನು ಎದುರಿಸಲಿದ್ದಾರೆ.

ಯೂಕಿ ಭಾಂಬ್ರಿ ಹಾಗೂ ಡಿವಿಜ್ ಶರಣ್ ಶುಕ್ರವಾರ ನಡೆದ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರ ನಡೆದ ಹಿನ್ನೆಲೆಯಲ್ಲಿ ಬೋಪಣ್ಣ ಫ್ರೆಂಚ್ ಓಪನ್‌ನಲ್ಲಿ ಸ್ಪರ್ಧೆಯಲ್ಲಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ.

ಪುರುಷರ ಡಬಲ್ಸ್ ಜೋಡಿ ಭಾಂಬ್ರಿ ಹಾಗೂ ಶರಣ್ ಎರಡನೇ ಸುತ್ತಿನ ಪಂದ್ಯದಲ್ಲಿ ಒಲಿವೆರ್ ಮರಾಚ್ ಹಾಗೂ ಮ್ಯಾಟ್ ಪಾವಿಕ್ ವಿರುದ್ಧ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News