ಕಾಬೂಲ್: ಮುಸ್ಲಿಮ್ ಧರ್ಮಗುರುಗಳ ಸಮಾವೇಶದಲ್ಲಿ ಸ್ಫೋಟ; 8 ಮಂದಿ ಸಾವು

Update: 2018-06-04 15:31 GMT

ಕಾಬೂಲ್, ಜೂ. 4: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ಸೋಮವಾರ ನಡೆದ ಮುಸ್ಲಿಮ್ ಧರ್ಮಗುರುಗಳ ಬೃಹತ್ ಸಮಾವೇಶವೊಂದರಿಂದ ಹೊರಬರುತ್ತಿದ್ದ ಧರ್ಮಗುರುಗಳ ಸಮೀಪ ಆತ್ಮಹತ್ಯಾ ಬಾಂಬರ್ ಓರ್ವ ತನ್ನನ್ನು ತಾನು ಸ್ಫೋಟಿಸಿಕೊಂಡಾಗ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ.

ಭಯೋತ್ಪಾದನೆಯನ್ನು ತ್ಯಜಿಸಲು ಶಾಂತಿಗಾಗಿ ಕರೆ ನೀಡಲು ಧರ್ಮಗುರುಗಳು ಅಲ್ಲಿ ಸೇರಿದ್ದರು.ಇತ್ತೀಚಿನ ತಿಂಗಳುಗಳಲ್ಲಿ ಕಾಬೂಲ್‌ನಲ್ಲಿ ನಡೆಯುತ್ತಿರುವ ಸರಣಿ ಬಾಂಬ್ ಸ್ಫೋಟಗಳಲ್ಲಿ ಡಝನ್‌ಗಟ್ಟಳೆ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮುಸ್ಲಿಮರ ಪವಿತ್ರ ರಮಝಾನ್ ತಿಂಗಳಲ್ಲೂ ರಕ್ತಪಾತ ನಡೆಯುತ್ತಲೇ ಇದೆ. ಸೋಮವಾರ ನಡೆದ ಆತ್ಮಹತ್ಯಾ ದಾಳಿಯ ಹೊಣೆಯನ್ನು ತಕ್ಷಣಕ್ಕೆ ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ. ಕಾಬೂಲ್‌ನಲ್ಲಿ ನಡೆದ ಹೆಚ್ಚಿನ ದಾಳಿಗಳ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಐಸಿಸ್ ವಹಿಸಿಕೊಂಡಿದೆ. ಆದರೆ, ಆ ಪೈಕಿ ಹಲವು ದಾಳಿಗಳನ್ನು ಹಕ್ಕಾನಿ ನೆಟ್‌ವರ್ಕ್ ನಡೆಸಿರುವ ಸಾಧ್ಯತೆ ಇದೆ ಎಂದು ಭದ್ರತಾ ಅಧಿಕಾರಿಗಳು ಹೇಳುತ್ತಾರೆ. ಹಕ್ಕಾನಿ ನೆಟ್‌ವರ್ಕ್ ಸಂಘಟನೆಯು ತಾಲಿಬಾನ್ ಭಯೋತ್ಪಾದಕ ಗುಂಪಿನೊಂದಿಗೆ ಸಂಯೋಜನೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News