ಚೀನಾ ಕಮ್ಯುನಿಸ್ಟ್ ಪಕ್ಷ, ಸರಕಾರದ ನೂರಾರು ಅಧಿಕಾರಿಗಳ ಆತ್ಮಹತ್ಯೆ

Update: 2018-06-05 17:31 GMT

ಬೀಜಿಂಗ್, ಜೂ. 5: ಚೀನಾ ಕಮ್ಯುನಿಸ್ಟ್ ಪಾರ್ಟಿ ಮತ್ತು ಚೀನಾ ಸರಕಾರದ ನೂರಾರು ಅಧಿಕಾರಿಗಳು ಇತ್ತೀಚಿನ ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರಕಾರಿ ಮಾಧ್ಯಮವೊಂದು ವರದಿ ಮಾಡಿದೆ.

ಪಕ್ಷ ಮತ್ತು ಸರಕಾರದ ಕನಿಷ್ಠ ಐವರು ಅಧಿಕಾರಿಗಳು ಒಂದೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ‘ಗ್ಲೋಬಲ್ ಟೈಮ್ಸ್’ನ ವರದಿಯೊಂದು ತಿಳಿಸಿದೆ.

2009 ಮತ್ತು 2017ರ ನಡುವಿನ ಅವಧಿಯಲ್ಲಿ 283 ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದೆ.

ಆದರೆ, ಬಹಿರಂಗಪಡಿಸದ ಆತ್ಮಹತ್ಯಾ ಪ್ರಕರಣಗಳು ಹಲವಾರು ಇರಬಹುದಾದ ಹಿನ್ನೆಲೆಯಲ್ಲಿ, ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಗಳ ಸಂಖ್ಯೆ ವಾಸ್ತವಿಕವಾಗಿ ಅಧಿಕವಿರಬಹುದು ಎಂದು ಈ ಕುರಿತ ಅಂಕಿಸಂಖ್ಯೆಗಳನ್ನು ಅಧ್ಯಯನ ಮಾಡಿರುವ ಚೈನೀಸ್ ಅಕಾಡೆಮಿ ಆಫ್ ಸಯನ್ಸಸ್‌ನ ಝೂ ಝೂಹಾಂಗ್ ಹೇಳುತ್ತಾರೆ.

ವಿವಿಧ ಸರಕಾರಿ ಇಲಾಖೆಗಳ 150ಕ್ಕೂ ಅಧಿಕಾರಿಗಳು 2013ರ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ 2016ರ ಜುಲೈಯಲ್ಲಿ ಪತ್ರಿಕಾ ವರದಿಯೊಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News