ಆಪರೇಶನ್ ಬ್ಲೂ ಸ್ಟಾರ್: ಕೆನಡದಲ್ಲಿ ಸಿಖ್ ಪ್ರತ್ಯೇಕತಾವಾದಿಗಳಿಂದ ಪ್ರತಿಭಟನೆ

Update: 2018-06-08 17:00 GMT

 ಟೊರಾಂಟೊ, ಜೂ. 8: ‘ಆಪರೇಶನ್ ಬ್ಲೂಸ್ಟಾರ್’ನ ವಾರ್ಷಿಕ ದಿನವಾದ ಗುರುವಾರ, ಕೆನಡ ಸರಕಾರದ ಕೇಂದ್ರ ಸ್ಥಳವಾಗಿರುವ ಪಾರ್ಲಿಮೆಂಟ್ ಹಿಲ್‌ನಲ್ಲಿ ಹಲವಾರು ಉಗ್ರವಾದಿ ಸಿಖ್ ಸಂಘಟನೆಗಳು ಮೆರವಣಿಗೆ ನಡೆಸಿದವು.

ಪ್ರತ್ಯೇಕ ಖಾಲಿಸ್ತಾನ ಪರವಾಗಿರುವ ಗುಂಪುಗಳ ಸದಸ್ಯರು ಈ ಸಂದರ್ಭದಲ್ಲಿ ಬಲಪ್ರದರ್ಶನ ನಡೆಸಿದವು.

ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ವಿವಾದಾತ್ಮಕ ಭಾರತ ಪ್ರವಾಸದ ಹಿನ್ನೆಲೆಯಲ್ಲಿ, ಕೆನಡದಲ್ಲಿನ ಖಾಲಿಸ್ತಾನ ಚಳವಳಿಯ ಮೇಲೆ ಹೆಚ್ಚಿನ ನಿಗಾ ಇಡಲಾದ ಹೊರತಾಗಿಯೂ ಈ ಬೆಳವಣಿಗೆ ನಡೆದಿವೆ.

ಶಿರೋಮಣಿ ಅಕಾಲಿ ದಳ ಕೆನಡ (ಈಸ್ಟ್) ಅಧ್ಯಕ್ಷ ಸುಖ್‌ಮಿಂದರ್ ಸಿಂಗ್ ಹಂಸ್ರ ಮೆರವಣಿಗೆಯ ಪ್ರಮುಖ ಸಂಘಟಕರಾಗಿದ್ದರು.

1984 ಜೂನ್ 1ರಿಂದ 8ರವರೆಗೆ, ಪಂಜಾಬ್ ರಾಜ್ಯದ ಅಮೃತಸರದಲ್ಲಿರುವ ಸ್ವರ್ಣಮಂದಿರದಿಂದ ಸಿಖ್ ಭಯೋತ್ಪಾದಕರನ್ನು ಹೊರದಬ್ಬುವುದಕ್ಕಾಗಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ‘ಆಪರೇಶನ್ ಬ್ಲೂ ಸ್ಟಾರ್’ ಎಂಬ ಹೆಸರಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News